ಸ್ಪ್ರೇ ಬಳಸಿ ಮತ್ತು ಬರಿಸಿ 15 ಕುರಿಗಳನ್ನು ಹೊತ್ತೊಯ್ದ ಕುರಿಗಳ್ಳರು - ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗಣಿಹಾರ
🎬 Watch Now: Feature Video

ವಿಜಯಪುರ: ದೊಡ್ಡಿಯಲ್ಲಿದ್ದ 15 ಕುರಿಗಳು ಕಳ್ಳತನವಾಗಿರುವ ಘಟನೆ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದಿದೆ. ಸುಭಾಷ ವಾಲೀಕಾರ ಎಂಬುವವರಿಗೆ ಸೇರಿದ ಕುರಿಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಸ್ಪ್ರೇ ಬಳಸಿ ಕುರಿಗಳಿಗೆ ಮತ್ತು ಬರಿಸಿ ದೊಡ್ಡಿಯಿಂದ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಘಟನೆ ನಡೆದಿದ್ದು ಗೊತ್ತಾಗಿಲ್ಲ ಎಂದು ಕುರಿ ಮಾಲೀಕ ಹೇಳಿದ್ದಾರೆ. ಕಳುವಾಗಿರುವ ಕುರಿಗಳ ಬೆಲೆ ಸುಮಾರು 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.