ತುಮಕೂರಿನಲ್ಲಿ ಕೋವಿಡ್-19 ಸೋಂಕಿಗೆ ಮತ್ತೊಂದು ಬಲಿ.. - ತುಮಕೂರಿನಲ್ಲಿ ಕೋವಿಡ್ 19 ಸೋಂಕಿಗೆ ಎರಡನೇ ಬಲಿ
🎬 Watch Now: Feature Video
ಕೋವಿಡ್-19 ಸೋಂಕಿಗೆ ತುಮಕೂರು ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ತುಮಕೂರು ನಗರದ ಕೆಹೆಚ್‌ಬಿ ಕಾಲೋನಿಯ 73 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈತ ಏಪ್ರಿಲ್ 25 ರಂದು ಆಸ್ಪತ್ರೆಗೆ ದಾಖಲಾಗಿದ್ದ. ಏಪ್ರಿಲ್ 26ರಂದು ಮೃತಪಟ್ಟಿದ್ದಾರೆ. ಮೃತಪಟ್ಟಾಗ ಈತನಿಗೆ ಕೊರೊನಾ ಸೋಂಕಿದೆ ಎಂದು ಸ್ಪಷ್ಟವಾಗಿರಲಿಲ್ಲ. ಈತನ ಶವ ಸಂಸ್ಕಾರ ಕೂಡ ಮಾಡಲಾಗಿತ್ತು. ಇದೀಗ ಈತನ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದೆ. ಈತನಿಗೆ ಕೋವಿಡ್-19ಸೊಂಕು ತಗುಲಿತ್ತು ಎಂಬುದು ಡೃಢವಾಗಿದೆ.