ನಾಳೆ ಸಚಿವ ಸಂಪುಟ ವಿಸ್ತರಣೆ ಇದೆ.. ಸದ್ಯ ಚರ್ಚೆ ಅನಗತ್ಯ ಎಂದ ಡಿಸಿಎಂ ಸವದಿ - current debate is unnecessary
🎬 Watch Now: Feature Video

ಚಿತ್ರದುರ್ಗ: ನಾಳೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕುರಿತು ಸ್ಪಷ್ಟನೆ ನೀಡುತ್ತಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಚಿತ್ರದುರ್ಗದ ಜನಸೇವಕ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವ್ರು, ಈಗಾಗಲೇ ಸಚಿವ ಸಂಪುಟದ ವಿಸ್ತರಣೆ ಕುರಿತಾಗಿ ಸಿಎಂ ಪ್ರತಿಕ್ರಿಯಿಸಿರುವುದರಿಂದ ಚರ್ಚೆ ಅನಗತ್ಯ. ಇನ್ನೊಂದು ಸಚಿವ ಸ್ಥಾನ ಬೆಳಗಾವಿಗೆ ದೊರೆಯುವ ನಿರೀಕ್ಷೆಯಲ್ಲಿದ್ದೇವೆ ಎಂದರು. ಬೆಳಗಾವಿಗೆ ಇನ್ನೊಂದು ಸಚಿವ ಸ್ಥಾನ ಸಿಕ್ಕರೆ ಸಂತೋಷವಾಗುತ್ತದೆ. ಇನ್ನು ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಸಿಗುವ ಕುರಿತು ಮಾಹಿತಿಯಿಲ್ಲ. ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ಸಿಗುತ್ತಾ ಅನ್ನೋದು ನಾಳೆ ತಿಳಿಯಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇದೇ ವೇಳೆ ತಿಳಿಸಿದರು.