ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಅಪರೂಪದ ಪಶ್ಚಿಮ ಜಾಗರ ಪೂಜೆ ಆರಂಭ - ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಪಶ್ಚಿಮ ಜಾಗರ ಪೂಜೆ
🎬 Watch Now: Feature Video

ಉಡುಪಿ: ಶ್ರೀ ಕೃಷ್ಣಮಠದಲ್ಲಿ ಅಪರೂಪದ ಪಶ್ಚಿಮ ಜಾಗರ ಪೂಜೆ ಆರಂಭವಾಗಿದೆ. ಬೆಳಗಿನ ಜಾವ, ಸೂರ್ಯೋದಯಕ್ಕೂ ಮುನ್ನ ಈ ಅಪರೂಪದ ಆಚರಣೆ ನಡೆಯುತ್ತದೆ. ಅಶ್ವಯುಜ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವಾದ ಇಂದು, ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಪೂಜೆ ನೆರವೇರಿಸಿದರು. ಇಂದಿನಿಂದ ನಿತ್ಯಪೂಜೆಗಳೊಂದಿಗೆ ಒಂದು ತಿಂಗಳ ಕಾಲ ಅಂದರೆ ಉತ್ಥಾನ ದ್ವಾದಶಿಯವರೆಗೆ ಪಶ್ಚಿಮ ಜಾಗರ ಪೂಜೆ ಜರುಗಲಿದೆ.