ಮಂಗಳೂರು ದಸರಾ ಮಹೋತ್ಸವದಲ್ಲಿ ಗಮನ ಸೆಳೆಯಿತು 'ಹುಲಿವೇಷ'! - ಮಂಗಳೂರು ದಸರಾ ಮಹೋತ್ಸವ ಸುದ್ದಿ
🎬 Watch Now: Feature Video
ಮಂಗಳೂರು: ದಸರಾ ಎಂದಾಕ್ಷಣ ಕರಾವಳಿಯಲ್ಲಿ ಮೊದಲು ನೆಪಾಗುವುದೇ ಹುಲಿವೇಷ. ತಾಸೆಯ(ಚರ್ಮ ವಾದ್ಯ) ಬಡಿತಕ್ಕೆ ತಕ್ಕಂತೆ ಗತ್ತು ಗಾಂಭೀರ್ಯದಿಂದ ಲಯಬದ್ಧವಾಗಿ ಕುಣಿಯುವ ಮೂಲಕ ಹುಲಿವೇಷಧಾರಿಗಳು ಎಲ್ಲರಲ್ಲೂ ಸಂಚಲನ ಮೂಡಿಸುತ್ತಾರೆ. ಮಂಗಳೂರು ದಸರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಹುಲಿವೇಷಧಾರಿಗಳ ಕುಣಿತವನ್ನು ಕಂಡು ಫಿದಾ ಆದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಆಯೋಜನೆಗೊಳ್ಳುವ ಮಂಗಳೂರು ದಸರಾ ಮಹೋತ್ಸವದಲ್ಲಿ ಹುಲಿವೇಷ ಎಲ್ಲರ ಗಮನ ಸೆಳೆಯಿತು.