ಖಾಲಿ ಚೀಲ ಖರೀದಿಸುವ ನೆಪದಲ್ಲಿ ಕಳ್ಳತನ... ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - haveri theft latest news
🎬 Watch Now: Feature Video

ಖಾಲಿ ಚೀಲ ಖರೀದಿಸುವ ನೆಪದಲ್ಲಿ ಗೊಬ್ಬರದ ಅಂಗಡಿಯಲ್ಲಿ ಖದೀಮರಿಬ್ಬರು ಕೈಚಳಕ ತೋರಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಾನಗಲ್ ತಾಲೂಕಿನ ಹೊಂಕಣ ಗ್ರಾಮದ ಗುಬ್ಬಿ ನಂಜುಂಡೇಶ್ವರ ಗೊಬ್ಬರ ಅಂಗಡಿಯಲ್ಲಿ ಮಂಗಳವಾರ ಮಧ್ಯಾಹ್ನ ಈ ಕೃತ್ಯ ನಡೆದಿದೆ. ಬೈಕ್‌ನಲ್ಲಿ ಬಂದಿದ್ದ ಕಳ್ಳರು ಖಾಲಿ ಚೀಲ ಖರೀದಿಸುವ ನೆಪದಲ್ಲಿ ಅಂಗಡಿಯಲ್ಲಿದ್ದ ಮಾಲಕಿಯ ಗಮನವನ್ನು ಬೇರೆಡೆ ಸೆಳೆದು ಕ್ಯಾಶ್ ಕೌಂಟರನಲ್ಲಿದ್ದ 1 ಲಕ್ಷದ 20 ಸಾವಿರ ರೂಪಾಯಿಯನ್ನು ಎಗರಿಸಿದ್ದಾರೆ ಈ ಚಾಲಾಕಿಗಳು. ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತಂತೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated : Jan 29, 2020, 9:35 PM IST