ದಿ.ಶಿವಳ್ಳಿ ಅವರ ಯಶೋಗಾಥೆಯ ಹಾಡು... ಸಾಂಗ್ಗೆ ಸಖತ್ ಸ್ಟೆಪ್ ಹಾಕಿದ ಯುವಕರು - Shivalli success story song
🎬 Watch Now: Feature Video
ಕುಂದಗೋಳ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದ ದಿ. ಸಿ.ಎಸ್. ಶಿವಳ್ಳಿಯವರ ಮೇಲೆ ಹಾಡಿದ ಹಾಡು ಸಖತ್ ವೈರಲ್ ಆಗಿದೆ. ಮೊಹರಂ ಹಬ್ಬದ ಅಂಗವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಜ್ಜೆ ಹಾಕುವುದು, ಲಾವಣಿ ಹಾಗೂ ಗೀಗೀ ಪದ ಹಾಡುವುದು ಸಾಮಾನ್ಯ. ಆದ್ರೆ ಕುಂದಗೋಳ ತಾಲೂಕಿನ ದೇವರಗುಡಿಹಾಳ ಗ್ರಾಮದ ಹೆಜ್ಜೆ ಮಾಸ್ತರ ದುರ್ಗಪ್ಪ ಎಂಬುವರು ಕ್ಷೇತ್ರದ ಮಾಜಿ ಸಚಿವ ದಿ.ಶಿವಳ್ಳಿ ಅವರ ಮೇಲೆ ಹೆಜ್ಜೆ ಪದ ಕಟ್ಟಿ ಹಾಡಿದ್ದಾರೆ. ಇದಕ್ಕೆ ಗ್ರಾಮದ ಯುವಕರು ಹೆಜ್ಜೆ ಹಾಕುವ ಮೂಲಕ ಗೌರವ ಸಲ್ಲಿಸಿದ್ದಾರೆ. ಹಾಡಿನಲ್ಲಿ ಶಿವಳ್ಳಿಯವರು ಹುಟ್ಟಿನಿಂದ ಹಿಡಿದು ಅವರ ರಾಜಕೀಯ ಜೀವನದ ಸಾಧನೆಯನ್ನು ಬಿಂಬಿಸಿದ್ದಾರೆ. ದಿ.ಶಿವಳ್ಳಿ ಅವರ ಯಶೋಗಾಥೆಯ ಈ ಜಾನಪದ ಗೀತೆ ಸಖತ್ ವೈರಲ್ ಆಗಿದೆ.