ಮೈ ಕೊರೆಯುವ ಚಳಿಯಲ್ಲೂ ಫಲಿತಾಂಶಕ್ಕಾಗಿ ಬೆಂಕಿ ಹಚ್ಚಿ ಕಾದು ಕುಳಿತ ಜನ! - Gram panchayat election result
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10063879-994-10063879-1609346821944.jpg)
ಅಭ್ಯರ್ಥಿಗಳ ಫಲಿತಾಂಶ ಬರುವಿಕೆಗಾಗಿ ಮೈ ಕೊರೆಯುವ ಚಳಿಯ ನಡುವೆಯೂ ಜನರು ಬೆಂಕಿಗೆ ಮೈವೊಡ್ಡಿ ರಕ್ಷಣೆ ಪಡೆದುಕೊಳ್ಳುತ್ತಿದ್ದಾರೆ. ನಗರದ ಬಿಡಿ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದ ಮೈದಾನದಲ್ಲಿ ಮೈ ಕೊರೆಯುವ ಚಳಿಗೆ ಮೈದಾನದ ಪಕ್ಕದಲ್ಲಿ ಬಿದ್ದ ಕಸ ತೆಗೆದುಕೊಂಡು ಬೆಂಕಿ ಹಚ್ಚಿ ಜನರು ಚಳಿಯಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದಾರೆ. ತಾಲೂಕಿನ ವಿವಿಧ ಹಳ್ಳಿಗಳಿಂದ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶಕ್ಕಾಗಿ ಆಗಮಿಸಿದ್ದ ಜನರು, ಬೆಂಬಲಿತ ಅಭ್ಯರ್ಥಿಗಳ ಗೆಲವು ಸಂಭ್ರಮಿಸಲು ಚಳಿಯನ್ನೂ ಲೆಕ್ಕಿಸದೆ ಕಾದು ಕುಳಿತಿದ್ದಾರೆ.