ವಿಜೃಂಭಣೆಯಿಂದ ನಡೆದ ತೆರಕಣಾಂಬಿ ಶ್ರೀಲಕ್ಷ್ಮಿವರದರಾಜಸ್ವಾಮಿ ರಥೋತ್ಸವ - ಚಾಮರಾಜನಗರ ಲೇಟೆಸ್ಟ್ ನ್ಯೂಸ್
🎬 Watch Now: Feature Video

ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಹೋಬಳಿ ಕೇಂದ್ರ ತೆರಕಣಾಂಬಿಯಲ್ಲಿ ಇಂದು ಶ್ರೀ ಲಕ್ಷ್ಮಿವರದ ರಾಜಸ್ವಾಮಿಯ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಮಧ್ಯಾಹ್ನ 12ಗಂಟೆಯ ಶುಭಲಗ್ನದಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಿತು. ರಥೋತ್ಸವದ ಮೆರವಣಿಗೆ ವಿವಿಧ ಕಲಾತಂಡ ಹಾಗೂ ವಾದ್ಯ, ಮೇಳಗಳೊಂದಿಗೆ ದೇವಸ್ಥಾನದಿಂದ ತೆರಕಣಾಂಬಿಯ ಬಸ್ ನಿಲ್ದಾಣದ ವೃತ್ತದವರೆಗೂ ಸಾಗಿತು. ಮೆರವಣಿಗೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡು ರಥಕ್ಕೆ ಹಣ್ಣು ದವನ ಎಸೆದು ತಮ್ಮ ಹರಕೆ ತೀರಿಸಿ ದೇವರ ಕೃಪೆಗೆ ಪಾತ್ರರಾದರು.