thumbnail

By

Published : May 15, 2021, 11:05 AM IST

ETV Bharat / Videos

ಉತ್ತರ ಕನ್ನಡದಲ್ಲಿಯೂ ತೌಕ್ತೆ ಅಬ್ಬರದ ಆತಂಕ: ಲಂಗರು ಪ್ರದೇಶಕ್ಕೆ ಬಂದ ನೂರಾರು ಬೋಟ್​​ಗಳು

ಕಾರವಾರ: ತೌಕ್ತೆ ಚಂಡಮಾರುತದ ಅಬ್ಬರ ಜೋರಾಗುವ ಸಾಧ್ಯತೆ ಬಗ್ಗೆ ಹವಮಾನ ಇಲಾಖೆ ಮೂನ್ಸೂಚನೆ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಲಾಗಿದೆ. ಈಗಾಗಲೇ ಮೀನುಗಾರಿಕೆಗೆ ತೆರಳಿದ್ದ ಬೋಟ್​​ಗಳಿಗೆ ಸೂಚನೆ ನೀಡಿ ವಾಪಸ್​ ಕರೆಸಿಕೊಂಡಿದ್ದು, ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಬಳಿ ಹೊರ ಜಿಲ್ಲೆ ಹಾಗೂ ರಾಜ್ಯದ ನೂರಾರು ಬೋಟ್​​ಗಳು ಲಂಗರು ಹಾಕಿವೆ. ಕಳೆದ ಎರಡು ದಿನದಿಂದ ಜಿಲ್ಲೆಯಾದ್ಯಂತ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ. ಮೀನುಗಾರರಿಗೆ ಹಾಗೂ ಸಾರ್ವಜನಿಕರಿಗೆ ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.