ಸ್ವಾಮೀಜಿಗಳು ಒಂದು ಸಮುದಾಯದ ಪರ ಇರಬಾರದು: ರಘು ಆಚಾರ್ - Raghu Achar chitradurga news
🎬 Watch Now: Feature Video
ಚಿತ್ರದುರ್ಗ: ಗಾಳಿ, ಬೆಳಕು ನೀರು, ದೇವರು ಹಾಗೂ ಸ್ವಾಮೀಜಿಗಳು ಯಾರ ಸ್ವತ್ತು ಅಲ್ಲ. ಸ್ವಾಮೀಜಿಗಳು ಸಮಾಜದ ಎಲ್ಲಾ ಸಮುದಾಯದ ಪರವಾಗಿ ಕೆಲಸ ಮಾಡಬೇಕೆಂದು ಚಿತ್ರದುರ್ಗ ನಗರದಲ್ಲಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಹೇಳಿದರು. ಒಂದು ಸಮುದಾಯದ ಪರವಾಗಿ ಇರಬಾರದು. ಎಲ್ಲಾ ಸಮುದಾಯಗಳ ಪರವಾಗಿರಬೇಕು. ವ್ಯಕ್ತಿಗಳ ಪರವಾಗಿ ಮೀಸಲಾತಿ ಕೇಳಬೇಕು ಎಂದರು. ಸಮಾಜದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮೀಸಲಾತಿ ಜಾರಿ ಮಾಡಲು ಸರ್ಕಾರ ಕ್ರಮಕ್ಕೆ ಮುಂದಾಗಬೇಕು. ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯ ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮೀಸಲಾತಿ ದೊರೆಯಬೇಕೆಂಬುದಾಗಿದೆ. ಸರ್ಕಾರ ಕೂಡ ಬಿಪಿಎಲ್ ಕಾರ್ಡ್ ಹೊಂದಿದ ವ್ಯಕ್ತಿಗಳಿಗೆ ಮೀಸಲಾತಿ ನೀಡಲಿ. ಅವರು ಪ್ರಗತಿ ಹೊಂದಿದ ಬಳಿಕ ಅದೇ ಸಮುದಾಯದ ಬೇರೆ ಬಿಪಿಎಲ್ ಕಾರ್ಡ್ ಹೊಂದಿದ ಸಮುದಾಯಕ್ಕೆ ಮೀಸಲಾತಿ ವರ್ಗಾಯಿಸುವ ಪ್ರಕ್ರಿಯೆ ಜಾರಿಯಾಗಬೇಕೆಂದು ಒತ್ತಾಯಿಸಿದರು.