ಶಿವಮೊಗ್ಗದಲ್ಲಿ ಕರ್ತವ್ಯನಿರತ ಪೊಲೀಸರಿಗೆ ಉಚಿತ ನೀರಿನ ಬಾಟಲ್ ವಿತರಿಸಿದ ವ್ಯಾಪಾರಿ - 21 ದಿನ ದೇಶವನ್ನು ಲಾಕ್ಡೌನ್
🎬 Watch Now: Feature Video
ಶಿವಮೊಗ್ಗ: ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಲು ಪ್ರಧಾನಿ ಮೋದಿ 21 ದಿನ ದೇಶವನ್ನು ಲಾಕ್ಡೌನ್ ಮಾಡುವಂತೆ ಕರೆ ನೀಡಿದ್ದಾರೆ. ಆದ್ರೂ ಜನ ಸುಮ್ಮನೆ ರಸ್ತೆಗಿಳಿದು ಸುತ್ತುತ್ತಿದ್ದಾರೆ. ಮೆಡಿಕಲ್, ಆಸ್ಪತ್ರೆಗೆ ಹೋಗುವವರನ್ನು ಬಿಟ್ಟು ಮಾರ್ಕೆಟ್ಗೆ ಬಂದವರನ್ನು ಹಿಡಿದು ತಮ್ಮ ಲಾಠಿ ರುಚಿ ತೋರಿಸುತ್ತಿದ್ದರು. ಬೈಕ್ ಹಾಗೂ ಲಾರಿ ಚಾಲಕರನ್ನು ಹಿಡಿದು ಬೈದು ಮನೆಯಲ್ಲಿ ಕುಳಿತುಕೊಳ್ಳಿ ಎಂದು ಬುದ್ಧಿ ಹೇಳಿ ಕಳುಹಿಸುತ್ತಿದ್ದಾರೆ. ಈ ನಡುವೆ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಪೊಲೀಸರು ಜನರನ್ನು ವಾಪಸ್ ಕಳುಹಿಸುವಾಗ ನೀರಿನ ವ್ಯಾಪಾರಿ ಸುರೇಶ್ ಎಂಬುವರು ಕರ್ತವ್ಯನಿರತ ಪೊಲೀಸರಿಗೆ ಉಚಿತವಾಗಿ ನೀರನ್ನು ವಿತರಿಸುವ ಮೂಲಕ ಮಾನವೀಯತೆ ತೋರಿದ್ದಾರೆ. ಈ ಕುರಿತು ನಮ್ಮ ಶಿವಮೊಗ್ಗ ಪ್ರತಿನಿಧಿ ಕಿರಣ್ ಕುಮಾರ್ ನಡೆಸಿರುವ ವಾಕ್ ಥ್ರೂ ಇಲ್ಲಿದೆ.