ಚಿಣ್ಣರಿಂದ ಸಾಮಾಜಿಕ ಕಳಕಳಿಯುಳ್ಳ ಚಿತ್ರಕಲಾ ಪ್ರದರ್ಶನ - Vijayapura news
🎬 Watch Now: Feature Video
ವಿಜಯಪುರ: ಮಕ್ಕಳ ದಿನಾಚರಣೆ ಅಂಗವಾಗಿ ಸಾಮಾಜಿಕ ಕಳಕಳಿಯುಳ್ಳ ಮಕ್ಕಳ ಚಿತ್ರಕಲಾ ಪ್ರದರ್ಶನವನ್ನು ಗೀತಾಂಜಲಿ ಮಾದರಿ ಶಾಲೆ ವಿದ್ಯಾರ್ಥಿಗಳು ಸಾರ್ವಜನಿಕರಿಗಾಗಿ ಪ್ರದರ್ಶಿಸಿದರು. ನಗರದ ಗಗನ ಮಹಲ್ ಉದ್ಯಾನವನದ ಮುಂಭಾದಲ್ಲಿ ಮಕ್ಕಳು ಬಿಡಿಸಿದ ಕೈ ಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಗೀತಾಂಜಲಿ ಶಾಲೆಯ 80ಕ್ಕೂ ಅಧಿಕ ಮಕ್ಕಳು, ಹೆಣ್ಣು ಭ್ರೂಣ ಹತ್ಯೆ, ನೀರು ಸಂರಕ್ಷಣೆ, ಪರಿಸರ, ಮದ್ಯಪಾನ ಸೇರಿದಂತೆ ಅನೇಕ ಸಮಾಜಿಕ ಜಾಗೃತಿ ಪಟಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
TAGGED:
Vijayapura news