ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಕನ್ನಡ ಕೋಗಿಲೆ ಸೀಸನ್-2 ವಿನ್ನರ್ ಖಾಸಿಂ! - ನೆರೆ ಸಂತ್ರಸ್ತರಿಗೆ ಸಹಾಯ
🎬 Watch Now: Feature Video
ಹಾವೇರಿ: ಖಾಸಗಿ ವಾಹಿನಿಯ ಕನ್ನಡ ಕೋಗಿಲೆ ಸೀಸನ್-2 ವಿನ್ನರ್ ಹಾನಗಲ್ ತಾಲೂಕಿನ ಸಾವಸಗಿ ಗ್ರಾಮದ ಖಾಸಿಂ ಅಲಿ ಇದೀಗ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾನೆ. ನೆರೆ ಸಂತ್ರಸ್ತ ಭಾಗದಲ್ಲಿರುವ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 70 ಸಾವಿರ ಮೌಲ್ಯದ
ಪಿಠೋಪಕರಣಗಳನ್ನು ವಿತರಿಸಿದ್ದಾನೆ. ಮಕ್ಕಳಿಗೆ ಪುಸ್ತಕ, ಪೆನ್ಸಿಲ್, ರಬ್ಬರ್, ಬಿಸ್ಕತ್ತು ನೀಡುವ ಮೂಲಕ ಸಹಾಯ ಹಸ್ತ ಚಾಚಿರುವ ಖಾಸಿಂ ಕಾಳಜಿಗೆ ಜಿಲ್ಲೆಯ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.