thumbnail

ಶಾರ್ಟ್ ಸರ್ಕ್ಯೂಟ್​: ದಗದಗನೇ ಹೊತ್ತಿ ಉರಿದ ಮೊಬೈಲ್​ ಅಂಗಡಿ!

By

Published : Nov 12, 2019, 3:44 PM IST

ಚಿತ್ರದುರ್ಗ: ಶಾರ್ಟ್ ಸರ್ಕ್ಯೂಟ್​ ಉಂಟಾಗಿ ಮೊಬೈಲ್ ಶಾಪ್​ಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಉಪಕರಣಗಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ನಡೆದಿದೆ. ಚಳ್ಳಕೆರೆ ನಗರದಲ್ಲಿರುವ ದತ್ತಾ ಮೊಬೈಲ್ ಶಾಪ್​ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಂಪ್ಯೂಟರ್ ಹಾಗೂ ಹೊಸ ಮೊಬೈಲ್​ಗಳು ಬೆಂಕಿಗಾಹುತಿಯಾಗಿದ್ದು, ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು‌. ಇನ್ನು ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.