ETV Bharat / state

ಸಮಾಜದಲ್ಲಿ ನಾವು ಸೌಹಾರ್ದತೆ, ಪ್ರೀತಿ-ವಿಶ್ವಾಸದಿಂದ ಇರುವುದು ಅವಶ್ಯಕ: ಸಿಎಂ - CM Siddaramaiah

ಸಿಂಧನೂರಿನಲ್ಲಿ ದಸರಾ ಮಹೋತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

author img

By ETV Bharat Karnataka Team

Published : 2 hours ago

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)

ರಾಯಚೂರು: ದಸರಾಕ್ಕೆ ಯಾವುದೇ ಜಾತಿ, ಧರ್ಮದ ಸೋಂಕಿಲ್ಲ. ನಮ್ಮ ಸಮಾಜದಲ್ಲಿ ನಾವು ಸೌಹಾರ್ದತೆ, ಪ್ರೀತಿ ವಿಶ್ವಾಸದಿಂದ ಇರುವುದು ಅವಶ್ಯಕ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಸಿಂಧನೂರಿನಲ್ಲಿಂದು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದಾದ ನಂತರ ನಗರದ ಗಾಂಧಿ ವೃತ್ತದಲ್ಲಿ ಜಿಟಿಜಿಟಿ ಮಳೆಯ ನಡುವೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಿಎಂ ಭಾಗವಹಿಸಿದರು. ಸಚಿವರಾದ ಹೆಚ್.ಕೆ.ಪಾಟೀಲ್, ಶರಣಪ್ರಕಾಶ್ ಪಾಟೀಲ್, ಎನ್.ಎಸ್.ಬೋಸರಾಜು, ಶಾಸಕ ಹಂಪನಗೌಡ ಬಾದರ್ಲಿ ಸೇರಿ ಹಲವರು ಭಾಗಿಯಾಗಿದ್ದರು.

ಸಿಎಂ ಸಿದ್ದರಾಮಯ್ಯ (ETV Bharat)

ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು. ಇದಾದ ನಂತರ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1695.85 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಂಧನೂರು-ಕಲ್ಮಲಾವರೆಗೆ 78.45 ಕಿ.ಮೀ ಚತುಷ್ಪಥ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಕುರಿತು ಮಾತನಾಡಿದ ಸಿಎಂ, ಕಳೆದ ವರ್ಷ ಬರಗಾಲ ಇತ್ತು. ಈ ವರ್ಷ ಎಲ್ಲ ಜಲಾಶಯಗಳು ತುಂಬಿವೆ. ಒಳ್ಳೆಯ ಬೆಳೆಯಿದೆ. ಈ ವರ್ಷ ಸಮೃದ್ಧಿಯನ್ನು ತರಲಿದೆ ಎಂಬ ವಿಶ್ವಾಸವಿದೆ. 371 ಜೆ ಸೇರ್ಪಡೆಯಾದಾಗಿನಿಂದ ಹೈ-ಕ ಭಾಗಕ್ಕೆ ವಿಶೇಷ ಸೌಲಭ್ಯ ಕೊಡಲಾಗುತ್ತಿದೆ ಎಂದರು.

ಇತ್ತೀಚೆಗೆ ನಡೆದ ಕಲಬುರಗಿ ಕ್ಯಾಬಿನೆಟ್ ಮೀಟಿಂಗ್​ನಲ್ಲಿ 57 ವಿಷಯದಲ್ಲಿ 47 ವಿಷಯಗಳು ಕಲ್ಯಾಣ ಕರ್ನಾಟಕಕ್ಕೆ ಸೇರಿದ್ದವು. 11,770 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಮಂಜೂರಾತಿ ಕೊಟ್ಟೆವು. ನಂಜುಂಡಪ್ಪ ವರದಿ ಜಾರಿಯಿಂದ ಏನಾಗಿದೆ ಅನ್ನೋದರ ಅಧ್ಯಯನಕ್ಕೆ ಗೋವಿಂದರಾವ್ ಸಮಿತಿ ರಚನೆ ಮಾಡಿದ್ದೇವೆ ಎಂದು ಹೇಳಿದರು.

1 ಲಕ್ಷ 9 ಸಾವಿರ ಹುದ್ದೆ ಗುರುತು ಮಾಡಿದ್ದೇವೆ: ಕೆಕೆಆರ್​ಡಿಬಿಗೆ ಈ ವರ್ಷ 5 ಸಾವಿರ ಕೋಟಿ ರೂ ಮಂಜೂರು ಮಾಡಿದ್ದಾರೆ. ಇದು ಓಟಿಗೋಸ್ಕರ ಮಾಡಿಲ್ಲ. ಹಿಂದುಳಿದ ಭಾಗದ ಜನ ಮುಂದೆ ಬರಬೇಕು. ಈ ಭಾಗದ ಯುವಕರು ಉನ್ನತ ಹುದ್ದೆಗಳಿಗೆ ಏರಬೇಕು. ಭಾಗದಲ್ಲಿ 1 ಲಕ್ಷ 9 ಸಾವಿರ ಹುದ್ದೆ ಗುರುತು ಮಾಡಿದ್ದೇವೆ. ಇದರಲ್ಲಿ 1 ಲಕ್ಷ 79 ಸಾವಿರ ಭರ್ತಿ ಮಾಡಿದ್ದೇವೆ. ಉಳಿದ ಹುದ್ದೆ ಹಂತಹಂತವಾಗಿ ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ದಸರಾ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ - Mysuru Dasara Flower Show

ETV Bharat Logo

Copyright © 2024 Ushodaya Enterprises Pvt. Ltd., All Rights Reserved.