ಕಾರವಾರ:ಶಾರ್ಟ್ ಸರ್ಕ್ಯೂಟ್​ನಿಂದ ನಗದು ಸಹಿತ ಲಕ್ಷಾಂತರ ರೂಪಾಯಿ ವಸ್ತುಗಳು ಬೆಂಕಿಗಾಹುತಿ - ಕಾರವಾರ

🎬 Watch Now: Feature Video

thumbnail

By

Published : Jun 23, 2020, 10:12 PM IST

ಕಾರವಾರ: ಶಾರ್ಟ್ ಸರ್ಕ್ಯೂಟ್​ನಿಂದ ಮನೆ ಹೊತ್ತಿ ಉರಿದು ನಗದು ಸಹಿತ ಗೃಹಬಳಕೆ ಸಾಮಗ್ರಿಗಳು ಬೆಂಕಿಗಾಹುತಿಯಾದ ಘಟನೆ ನಗರದ ನಂದನಗದ್ದಾ ಬಳಿ ನಡೆದಿದೆ. ತೇಲಂಗ ರಸ್ತೆಯ ಪ್ರಕಾಶ ಕೊಳಂಕರ್ ಎನ್ನುವವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ನೀಡಿದ್ದರು. ಬಾಡಿಗೆದಾರರು ಮನೆಯಲ್ಲಿಲ್ಲದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು ಸಹ 28 ಸಾವಿರ ನಗದು ಸೇರಿದಂತೆ 3 ಲಕ್ಷ ರೂಪಾಯಿಯಷ್ಟು ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದವು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.