ಮಂಡ್ಯ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಗ್ಯಾರೇಜ್ - shops are burned by electric short circuit
🎬 Watch Now: Feature Video
ಮಂಡ್ಯ: ಮೋಟಾರ್ ಸೈಕಲ್ ಗ್ಯಾರೇಜ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಇದರ ಪರಿಣಾಮ ಪಕ್ಕದ ಅಂಗಡಿ ಮಳಿಗೆಗಳು ಸಹ ಸುಟ್ಟು ಭಸ್ಮವಾಗಿವೆ. ಮೊಗಣ್ಣ ಹಾಗೂ ಯೋಗಾನಂದ ಅವರಿಗೆ ಸೇರಿದ ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ. ಸರ್ವೀಸ್ ಸ್ಟೇಷನ್ನಲ್ಲಿದ್ದ ಐದಾರು ಬೈಕ್, ಆಯಿಲ್, ಟೈರ್ಗಳು, ಚಿಕನ್ ಅಂಗಡಿಯಲ್ಲಿದ್ದ ಯಂತ್ರೋಪಕರಣಗಳು ಹಾಗೂ ಕೋಳಿಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದ ಮಾಲೀಕರಿಗೆ ಸುಮಾರು 15 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.