ಮೂರು ಮನೆಗಳಿಗೆ ನುಗ್ಗಿ ನಗದು-ಚಿನ್ನಾಭರಣ ದೋಚಿ ಕಳ್ಳರು ಪರಾರಿ - ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ
🎬 Watch Now: Feature Video

ಕಲಬುರಗಿ: ತಡರಾತ್ರಿ ಮನೆಗಳ ಸರಣಿ ಕಳ್ಳತನ ನಡೆದಿರುವ ಘಟನೆ ನಗರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ಜರುಗಿದೆ. ಬೇಸಿಗೆ ಹಿನ್ನೆಲೆ ಮನೆಯವರು ಛಾವಣಿ ಮೇಲೆ ಮಲಗಿದ್ದ ವೇಳೆ ಮೂರು ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಮನೆ ಬೀಗ ಮುರಿದು ಒಳ ನುಗ್ಗಿ ಚಿನ್ನಾಭರಣ ಹಾಗೂ 5 ಸಾವಿರ ರೂ. ನಗದು ದೋಚಿ ಖದೀಮರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎನ್ಆರ್ ಕಾಲೋನಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.