ಬಾಗಲಕೋಟೆ: ಉತ್ಸಾಹದಿಂದ ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳು - ಶಾಲಾ ಕಾಲೇಜುಗಳು ಪುನರಾರಂಭ
🎬 Watch Now: Feature Video

ಬಾಗಲಕೋಟೆ: ಇಂದು ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಬಹು ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ಕಾಲೇಜು ಕಟ್ಟಡದೆದುರು ಸಾಮಾಜಿಕ ಅಂತರಕ್ಕಾಗಿ ಬಾಕ್ಸ್ ಹಾಕಲಾಗಿದ್ದು, ಥರ್ಮಲ್ ಸ್ಕ್ಯಾನಿಂಗ್ ಮೂಲಕ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಶಾಲಾ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಆವರಣದೊಳಗೆ ಪ್ರವೇಶಿಸುವ ಮುನ್ನ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಒಳಗೆ ಬಿಡಲಾಗುತ್ತಿದೆ. ಇನ್ನೂ ಶಾಲಾ-ಕಾಲೇಜು ಕಟ್ಟಡದ ಮುಂದೆ ತಳಿರು ತೋರಣ ಕಟ್ಟಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಗಿದೆ. ಒಳಗಡೆ ಸಹ ಸಾಮಾಜಿಕ ಅಂತರದಿಂದ ವಿದ್ಯಾರ್ಥಿಗಳು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.