ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಶಾಸಕ ಸತೀಶ ಜಾರಕಿಹೊಳಿ - latest belgavi news
🎬 Watch Now: Feature Video
ಗೋಕಾಕ್ ಉಪಚುನಾವಣೆ ರಂಗೇರಿದ್ದು, ಇಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಗೋಕಾಕ ನಗರಸಭೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅವರು ಅಧಿಕಾರಿಗಳ ಜೊತೆ ಸೇರಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ನಂತರ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಗೌಪ್ಯ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸತೀಶ ಹಾಗೂ ಲಖನ್ ಜಾರಕಿಹೊಳಿ ಗುಂಪಿನಲ್ಲಿ ಗುರುತಿಸಿಕೊಂಡ ಸದಸ್ಯರು ಮಾತ್ರ ಭಾಗವಹಿಸಿದ್ದು, ರಮೇಶ ಜಾರಕಿಹೊಳಿ ಅವರ ಗುಂಪಿನ ಸದಸ್ಯರು ಗೈರಾಗಿದ್ದರು. ಈ ಹಿಂದೆ ನಗರಸಭೆ ಭ್ರಷ್ಟಾಚಾರದ ಬಗ್ಗೆ ಹಾಡಿನ ರೂಪದಲ್ಲಿ ತೆರೆಗೆ ತಂದಿದ್ದ ಅವರು ಇದೀಗ ಸಭೆ ನಡೆಸಿತ್ತಿರುವುದು ಕುತೂಹಲ ಮೂಡಿಸಿದೆ.
Last Updated : Oct 15, 2019, 7:54 PM IST