ಹೈದರಾಬಾದ್: ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಂದು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆಯ ಕರಡು ನಿಯಮಗಳನ್ನು ಪ್ರಕಟಿಸಿದೆ. ಬಳಕೆದಾರರ ಡೇಟಾದ ಸಂಗ್ರಹಣೆ, ಸಂಗ್ರಹಣೆ ಮತ್ತು ಸಂಸ್ಕರಣೆಯ ಗೌಪ್ಯತೆ ಮತ್ತು ಡೇಟಾ ಉಲ್ಲಂಘನೆ ನಿಯಮ ರೂಪಿಸಿದೆ. ಅಲ್ಲದೇ ಮಕ್ಕಳ ಡೇಟಾ ಗೌಪ್ಯತೆ ಮತ್ತು ಸುರಕ್ಷತೆ ನಿಯಮಗಳನ್ನು ಪಟ್ಟಿ ಮಾಡಿದೆ.
2023 ಆಗಸ್ಟ್ನಲ್ಲಿನ ಈ ಕಾಯ್ದೆಗಳು ಸಂಸತ್ತಿನಲ್ಲಿ ಪಾಸ್ ಆಗಿದ್ದು, ಇದೀಗ ಸರ್ಕಾರ ಈ ಕುರಿತು ಸಾರ್ವಜನಿಕರ ಪ್ರತಿಕ್ರಿಯೆಗೆ ಕೋರುತ್ತಿದೆ. MyGov ಪೋರ್ಟಲ್ನಲ್ಲಿ ಫೆಬ್ರವರಿ 18, 2025ರವರೆಗೆ ಸಾರ್ವಜನಿಕರು ಈ ಕುರಿತು ಅಭಿಪ್ರಾಯ ತಿಳಿಸಬಹುದಾಗಿದೆ. ಈ ಕರಡಿನಲ್ಲಿರುವ ಪ್ರಮುಖ ಅಂಶ ಏನು ಎಂಬ ಕುರಿತ ಮಾಹಿತಿ ಇಲ್ಲಿದೆ.
ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (ಡಿಪಿಡಿಪಿ) ಕರಡು ನಿಯಮ, 2025
ಸೂಚನೆ ಮತ್ತು ಒಪ್ಪಿಗೆ
- ಸೂಚನೆ: ವ್ಯಕ್ತಿಯೊಬ್ಬ ವೈಯಕ್ತಿಕ ಡೇಟಾವನ್ನು ಪಡೆಯುವ ಮುನ್ನ ಈ ಕುರಿತು ಕಡ್ಡಾಯವಾಗಿ ಅವರಿಗೆ ಸೂಚನೆ ನೀಡಬೇಕು. ಈ ನೋಟಿಸ್ ಸರಳವಾಗಿ, ಸ್ಪಷ್ಟ ಭಾಷೆಯಲ್ಲಿ ಯಾವ ಕಾರಣಕ್ಕೆ ದತ್ತಾಂಶ ಪಡೆಯಲಾಗುತ್ತಿದೆ ಎಂಬ ಪಟ್ಟಿ ಮತ್ತು ಯಾವ ಉದ್ದೇಶಕ್ಕಾಗಿ ಪಡೆಯಲಾಗುತ್ತಿದೆ. ಹೇಗೆ ಬಳಕೆ ಮಾಡಲಾಗುವುದು ಎಂಬ ಕುರಿತು ವಿವರಣೆ ನೀಡಬೇಕು.
- ಸ್ಪಷ್ಟ ಸಮ್ಮತಿ: ಡೇಟಾವನ್ನು ಸಂಗ್ರಹಿಸುವ ಮುನ್ನ ಕಂಪನಿಗಳು ವ್ಯಕ್ತಿಯಿಂದ ಡೇಟಾ ಪಡೆಯಲು ಅವರಿಂದ ನಿಖರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದ್ದು, ಡೇಟಾ ಬಳಕೆಯ ಉದ್ದೇಶವನ್ನು ಸಂಪೂರ್ಣವಾಗಿ ಅರ್ಥೈಸಬೇಕಿದೆ.
- ಹಿಂಪಡೆಯುವ ಒಪ್ಪಿಗೆ: ಒಪ್ಪಿಗೆ ನೀಡಿ ಡೇಟಾ ನೀಡಿದ ಬಳಿಕವೂ ಯಾವುದೇ ಸಮಯದಲ್ಲಿ ನಿರ್ಧಾರ ಬದಲಾಯಿಸಿ ಅದನ್ನು ಹಿಂಪಡೆಯಬಹುದು. ಇದರಿಂದ ಹಿಂಪಡೆಯುವ ಪ್ರಕ್ರಿಯೆಯನ್ನು ಕ್ಲಿಷ್ಟಕರವಾಗಿಸುವುದನ್ನು ತಡೆಯಬಹುದು.
- ಸಂಬಂಧಿತರ ಒಪ್ಪಿಗೆ: ಕನಿಷ್ಟ 2 ಕೋಟಿ ಮೌಲ್ಯದ ಭಾರತದಲ್ಲಿ ನೋಂದಾಯಿಸಿ ಸಂಬಂಧಿತ ಮ್ಯಾನೇಜರ್ ಜೊತೆಗೆ ನಿರ್ವಹಣೆ ಮತ್ತು ನಿಮ್ಮ ಒಪ್ಪಿಗೆ ದಾಖಲು ಮಾಡಲು ಸಹಾಯ ಮಾಡುತ್ತದೆ.
ಡೇಟಾ ಸಂಗ್ರಹ ಮತ್ತು ಭದ್ರತೆ:
- ಡೇಟಾ ಸಂಕ್ಷಿಪ್ತತೆ: ಕಂಪನಿಗಳು ಅಗತ್ಯವಿದ್ದಾಗ ಮಾತ್ರ ದತ್ತಾಂಶವನ್ನು ಸಂಗ್ರಹಿಸಬಹುದು. ಈ ದಾಖಲೆ ಪೂರ್ಣಗೊಂಡ ಬಳಿಕ ಇದನ್ನು ಅಳಿಸಿ ಹಾಕಬೇಕು.
- ರಕ್ಷಣಾ ಕ್ರಮ: ಎನ್ಕ್ರಿಪ್ಷನ್, ಲಭ್ಯತೆ ನಿಯಂತ್ರಣ ಮತ್ತು ಡೇಟಾ ಬ್ಯಾಕ್ಅಪ್ ನಂತರ ರಕ್ಷಣಾ ಸುರಕ್ಷತಾ ಕ್ರಮವನ್ನು ಕಂಪನಿಗಳು ಭರವಸೆಗಳಿವೆ. ಡೇಟಾ ಪ್ರೊಸೆಸರ್ ಜೊತೆಗೆ ಒಪ್ಪಂದಗಳು ಕೂಡ ಭದ್ರತಾ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು
ಮಕ್ಕಳ ಡೇಟಾ:
- ಮಕ್ಕಳಿಗಾಗಿ ವಿಶೇಷ ನಿಯಮ: ಕಂಪನಿಗಳು ಮಕ್ಕಳ ವೈಯಕ್ತಿಯ ಡೇಟಾ ಪ್ರಕ್ರಿಯೆಗೆ ಮುನ್ನ ಅವರ ಕಾನೂನಾತ್ಮಕ ಗಾರ್ಡಿಯನ್ ಅಥವಾ ಪೋಷಕರಿಂದ ಒಪ್ಪಿಗೆ ಪಡೆಯಬೇಕು. ವೈಯಕ್ತಿಕ ಡೇಟಾಗಳು ಸರ್ಕಾರ ನೀಡಿದ ಐಡಿಗಳು ಅಥವಾ ಡಿಜಿಟಲ್ ಟೋಕನ್‌ಗಳನ್ನು ಬಳಸಿಕೊಂಡು ಪೋಷಕರ ಗುರುತನ್ನು ಪರಿಶೀಲಿಸಬೇಕು.
- ಮಕ್ಕಳಿಗಾಗಿ ಖಾಸಗಿ ಮಾನದಂಡ: ಸಾಮಾಜಿಕ ಮಾಧ್ಯಮದ ಜಾಲತಾಣ ಮತ್ತು ವೆಬ್ಸೈಟ್ ಸರ್ಕಾರ ನೀಡಿದ ಐಡಿಗಳು ಅಥವಾ ಡಿಜಿಟಲ್ ಟೋಕನ್ ಗುರುತು ಸ್ಥಾಪಿಸುವುದು ಅಗತ್ಯ.
- ವಿನಾಯಿತಿ: ಮಕ್ಕಳ ಡೇಟಾ ವಿಚಾರದಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಗಳು ಶೆಡ್ಯೂಲ್ 4ರಲ್ಲಿ ಕೆಲವು ನಿಬಂಧನೆಯಿಂದ ವಿನಾಯಿತಿ ಹೊಂದಿರುತ್ತದೆ.
- ಡೇಟಾ ಉಲ್ಲಂಘನೆ ಮತ್ತು ಗಡಿ ದಾಟಿದ ಡೇಟಾ ವರ್ಗಾವಣೆ
- ಡೇಟಾ ಉಲ್ಲಂಘನೆ ನೋಟಿಫಿಕೇಷನ್: ಡೇಟಾ ಉಲ್ಲಂಘನೆ ಆದಾಗ, ಕಂಪನಿಗಳು ತಕ್ಷಣಕ್ಕೆ ವ್ಯಕ್ತಿ ಮತ್ತು ಡೇಟಾ ರಕ್ಷಣಾ ಮಂಡಳಿಗೆ ತಿಳಿಸಿಬೇಕು. ಈ ನೋಟಿಸ್ನಲ್ಲಿ ಉಲ್ಲಂಘನೆ ಮಾಹಿತಿ, ಸಂಭಾವ್ಯ ಪರಿಣಾಮಗಳು ಮತ್ತು ತಗ್ಗಿಸುವಿಕೆಯ ಹಂತಗಳುಗಳ ಕುರಿತು ತಿಳಿಸಬೇಕು
- ಗಡಿ ದಾಡಿ ಡೇಟಾ ವರ್ಗಾವಣೆ: ಕೇಂದ್ರ ಸರ್ಕಾರದ ಒಪ್ಪಿಗೆ ಇದ್ದಲ್ಲಿ ಮಾತ್ರ ಇದು ಸಾಧ್ಯ. ಮಾಹಿತಿ ಪಡೆಯುವ ದೇಶವೂ ನಿರ್ದಿಷ್ಟ ಡೇಟಾ ರಕ್ಷಣಾ ಮಾನದಂಡದೊಂದಿಗೆ ಅನುಮತಿ ಪಡೆಯಬೇಕು.
ಪ್ರಮುಖ ಡೇಟಾ ಮಾಹಿತಿ ಮತ್ತು ಸಂಪರ್ಕ ಮಾಹಿತಿ:
- ಎಸ್ಡಿಎಫ್: ಅನೇಕ ದೊಡ್ಡ ಸಂಸ್ಥೆಗಳು ಹೆಚ್ಚಿನ ಮಟ್ಟದ ಅಥವಾ ಸೂಕ್ಷ್ಮ ಡೇಟಾಗಳನ್ನು ಹೊಂದಿರುತ್ತದೆ. ಅವರು ವಾರ್ಷಿಕ ಡಿಪಿಐಎಗೆ ಒಳಪಡಿಸಬೇಕು. ಈ ವೇಳೆ ಆಡಿಟ್ಸ್ ಮತ್ತು ಆಲ್ಗೊಥರಿಮ್ ಡೇಟಾ ಪ್ರಿನ್ಸಪಲ್ ಗೆ ಯಾವುದೇ ಹಾನಿ ಮಾಡಬಾರದು.
- ಸಂಪರ್ಕ ಮಾಹಿತಿ: ವೈಯಕ್ತಿಕ ಡೇಟಾವನ್ನು ಡೇಟಾ ಸಂಬಂಧಿತ ವಿಚಾರಣೆ ಕುರಿತು ತಮ್ಮ ವೆಬ್ಸೈಟ್, ಆಪ್ ಮತ್ತು ಪ್ರತಿಕ್ರಿಯೆಗಳಲ್ಲಿ ಪ್ರಕಟಿಸಬೇಕು. ಇದು ಡೇಟಾ ಪ್ರೊಟೆಕ್ಷನ್ ಅಧಿಕಾರಿ ಅಥವಾ ಅಧಿಕೃತ ಪ್ರತಿನಿಧಿಯ ಸಂಪರ್ಕವನ್ನು ಹೊಂದಿರಬೇಕು.
- ಡೇಟಾ ಪ್ರಿನ್ಸಿಪಾಲ್ಸ್ ಹಕ್ಕು: ಡೇಟಾ ಮಾಹಿತಿಗಳು ಪಡೆಯಲು ಡೇಟಾ ಪ್ರಿನ್ಸಿಪಾಲ್ಗಳು ಮನವಿ ನೀಡಬಹುದು. ಈ ವೇಳೆ ಯಾರ ವೈಯಕ್ತಿಕ ಡೇಟಾವನ್ನು ಯಾವ ಆಧಾರದ ಮೇಲೆ ಯಾರಿಗೆ ನೀಡಲಾಗುತ್ತಿದೆ ಎಂಬುದನ್ನು ತಿಳಿಸಬೇಕು. ಪ್ರಕಟಣೆ ಪ್ರಕ್ರಿಯೆ ಮತ್ತು ಅಗತ್ಯ ಅಂಶಗಳ ಮನವಿಯನ್ನು ಪಾಲಿಸಬೇಕು. ವೈಯಕ್ತಿಯ ಡೇಟಾಗಳನ್ನು ಹಕ್ಕುಗಳನ್ನು ಚಲಾಯಿಸುವ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಪ್ರಕಟಿಸಿ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ಟೈಮ್‌ಲೈನ್‌ಗಳನ್ನು ಒದಗಿಸಬೇಕು.
ಸ್ಥಿತಿ ಮತ್ತು ಜಾರಿ:
- ಡೇಟಾ ಪ್ರಕ್ರಿಯೆ ಸ್ಥಿತಿ: ಸುರಕ್ಷತಾ ಮಾರ್ಗಸೂಚಿ ಮತ್ತು ಡೇಟಾ ನಿಖರತೆ ಜೊತೆಗೆ ನಿರ್ದಿಷ್ಟ ಉದ್ದೇಶಕ್ಕಾಗಿ ಕಾನೂನಾತ್ಮಕತೆಯ ಪ್ರಕ್ರಿಯೆ ನಡೆಸಬೇಕು. ಈ ಸಂಬಂಧ ವಿಚಾರಣೆಗಾಗಿ ಮಾಹಿತಿ ಮತ್ತು ಸಂಪರ್ಕ ವಿವರದ ಮಾಹಿತಿ ನೀಡುವುದು ಅಗತ್ಯ.
- ಶೋಧದ ಜೊತೆ ಆಯ್ಕೆ ಸಮಿತಿ: ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಹಾಗೂ 2025, ಡಿಪಿಡಿಪಿ ಜಾರಿ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುತ್ತಾರೆ.
- ಡೇಟಾ ರಕ್ಷಣಾ ಮಂಡಳಿ: ಈ ಕರಡಿನ ಉದ್ದೇಶವೂ ಉಲ್ಲಂಘನಾ ತನಿಖೆ ಮತ್ತು ದಂಡ ಜಾರಿಗೆ ಡೇಟಾ ರಕ್ಷಣಾ ಮಂಡಳಿ ಸ್ಥಾಪಿಸುವುದಾಗಿದೆ.ಈ ಮಂಡಳಿಯನ್ನು ಡಿಜಿಟಲ್ ಆಧಿಕಾರಿಗಳು ಕಾರ್ಯ ನಿರ್ವಹಣೆ ಮಾಡುತ್ತಾರೆ.
ಇದನ್ನೂ ಓದಿ: ಕರಡು ಪ್ರಸ್ತಾವನೆ: ಮಕ್ಕಳ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಪೋಷಕರ ಒಪ್ಪಿಗೆ ಕಡ್ಡಾಯ ಎಂದ ಕೇಂದ್ರ ಸರ್ಕಾರ