ಸಂಕ್ರಾಂತಿ ಹಬ್ಬ... ದೊಡ್ಡಬಳ್ಳಾಪುರದಲ್ಲಿ ಗ್ರಾಮೀಣ ಸೊಬಗನ್ನು ಹೆಚ್ಚಿಸಿದ ಜೋಡೆತ್ತುಗಳ ಮೆರವಣಿಗೆ - ಗ್ರಾಮಸ್ಥರಲ್ಲಿ ಗ್ರಾಮೀಣ ಸುಗ್ಗಿಯನ್ನು ಮನವರಿಕೆ
🎬 Watch Now: Feature Video

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬ ಜೋರಾಗಿ ನಡೆಯಿತು. ಆಧುನಿಕ ಭರಾಟೆಯಲ್ಲಿ ಆಚರಣೆ ಮಾಡುತ್ತಾ ಬಂದಿದ್ದ ಗ್ರಾಮಸ್ಥರಲ್ಲಿ ಗ್ರಾಮೀಣ ಸುಗ್ಗಿಯನ್ನು ಮನವರಿಕೆ ಮಾಡಿಕೊಟ್ಟರು ತೂಬಗೆರೆ ಹೋಬಳಿ ಹಿತಾರಕ್ಷಣ ಸಮಿತಿ. ಗ್ರಾಮಸ್ಥರೆಲ್ಲ ಒಟ್ಟುಗೂಡುವಂತೆ ಮಾಡಿ ಬೀದಿಗಳಲ್ಲಿ ರಂಗೋಲಿ ಹಾಕಿಸುವುದು, ಯುವಕರಿಂದ ಜೋಡೆತ್ತುಗಳನ್ನು ಸಿಂಗರಿಸಿ ಬೀದಿಯಲ್ಲಿ ಮೆರವಣಿಗೆ ನಡೆಸಿ ಹಬ್ಬಕ್ಕೆ ಮೆರುಗು ತಂದರು. ಆಕರ್ಷಕ ರಂಗೋಲಿ ಬಿಡಿಸಿದವರಿಗೆ ಬಹುಮಾನ ಕೊಟ್ಟು ಪ್ರೋತ್ಸಾಹಿಸಲಾಯಿತು. ಇನ್ನು ಸಂಜೆ ದನಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ಸಹ ಅಯೋಜನೆ ಮಾಡಿದ್ದಾಗಿ ಗ್ರಾಮಸ್ಥರು ತಿಳಿಸಿದರು.