ಶಿವಮೊಗ್ಗ ಮಹಿಳಾ ಪೊಲೀಸರಿಗೆ ಕುಂಕುಮ, ಬಳೆ ನೀಡಿ ಸಂಕ್ರಾಂತಿ ಆಚರಣೆ - ಶಿವಮೊಗ್ಗ ಮಹಿಳಾ ಪೋಲಿಸ್ ಠಾಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10239452-thumbnail-3x2-dvg.jpg)
ಇಂದು ಸಂಕ್ರಾಂತಿ ಹಬ್ಬವನ್ನು ನಾಡಿನ ಜನತೆ ಆಚರಿಸುತ್ತಿದ್ದಾರೆ. ಅದರಂತೆ ನಗರದ ಸ್ಟೈಲ್ ಡ್ಯಾನ್ಸ್ ಸಂಸ್ಥೆಯ ಕಾರ್ಯಕರ್ತರು ಇಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರಿಗೆ ಅರಿಶಿನ ಕುಂಕುಮ, ಬಾಗಿನ ಹಾಗೂ ಗುಲಾಬಿ ಹೂ, ಎಳ್ಳು, ಬೆಲ್ಲ ನೀಡುವ ಮೂಲಕ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಸದಾ ಕಾಲ ಹಬ್ಬ ಹರಿದಿನಗಳನ್ನು ಬಿಟ್ಟು ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರನ್ನು ರಕ್ಷಣೆ ಮಾಡುವ ಪೊಲೀಸರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಮಹಿಳಾ ಪೊಲೀಸರಿಗೆ ಅಭಿನಂದಿಸಿದ್ದು ವಿಶೇಷವಾಗಿತ್ತು.