ಡಿಕೆಶಿ ಬಂಧನದಿಂದ ಕಾಂಗ್ರೆಸ್ ಇಮೇಜ್ಗೆ ಧಕ್ಕೆಯಾಗಿಲ್ಲ: ದಿನೇಶ್ ಗುಂಡೂರಾವ್ - ಕಾಂಗ್ರೆಸ್ ಪ್ರತಿಭಟನೆ
🎬 Watch Now: Feature Video

ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನಕ್ಕೆ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ. ಕಾಂಗ್ರೆಸ್ ಮುಖಂಡರನ್ನ ಕೇಂದ್ರ ಟಾರ್ಗೆಟ್ ಮಾಡ್ತಿದೆ. ಡಿ ಕೆ ಶಿವಕುಮಾರ ಜೊತೆ ನಾವಿದ್ದೇವೆ. ಕೇಂದ್ರದ ಈ ಧೋರಣೆ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರೆಸುತ್ತೆ ಎಂದರು. ಡಿಕೆಶಿ ಬಂಧನದಿಂದ ಕಾಂಗ್ರೆಸ್ಗೆ ಹಿನ್ನಡೆಯಾಗಿಲ್ಲ. ಕಾಂಗ್ರೆಸ್ ಇಮೇಜ್ಗೆ ಧಕ್ಕೆಯಾಗಿಲ್ಲ. ಇದು ಕೇಂದ್ರ ಬಿಜೆಪಿ ಸರ್ಕಾರದ ಹುನ್ನಾರ ಅನ್ನೋದು ಸಾಬೀತಾಗಿದೆ ಎಂದರು.