ಬಳ್ಳಾರಿ ನಾಲೆಯಿಂದ ರಸ್ತೆ ಮುಳುಗಡೆ: ನೀರಲ್ಲೇ ಶವ ಹೊತ್ತೊಯ್ದು ಅಂತ್ಯಸಂಸ್ಕಾರ - Belagavi latest news
🎬 Watch Now: Feature Video
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಳ್ಳಾರಿ ನಾಲೆ ಅಪಾಯ ಮಟ್ಟ ಮೀರಿ ಹರಿಯಿತ್ತಿದೆ. ಹೀಗಾಗಿ ನಗರದ ಹಲವು ಬಡಾವಣೆ ಜಲಾವೃತಗೊಂಡಿವೆ. ಮುಳುಗಡೆಯಾದ ರಸ್ತೆಯಲ್ಲೇ ಶವವನ್ನು ಸಂಬಂಧಿಕರು ಸ್ಮಶಾನಕ್ಕೆ ಸಾಗಿಸಿದ ಘಟನೆ ಬೆಳಗಾವಿಯ ಸಾಯಿನಗರದಲ್ಲಿ ನಡೆದಿದೆ. ಬಳ್ಳಾರಿ ನಾಲೆಯ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ. ರಸ್ತೆಗಳು ಮುಳುಗಡೆಯಾದ ಕಾರಣ ಶವದ ವಾಹನ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಜಲಾವೃತಗೊಂಡ ರಸ್ತೆಯಲ್ಲಿ ಸಂಬಂಧಿಕರು ಶವಕ್ಕೆ ಹೆಗಲುಕೊಟ್ಟು ಹೊರಕ್ಕೆ ತಂದಿದ್ದಾರೆ.