ಎಟಿಎಸ್ ಕಾರ್ಯಪ್ರವೃತವಾಗಲು ಸರ್ಕಾರ ಆದಷ್ಟು ಬೇಗ ಇಲಾಖೆಗೆ ಹಣ ನೀಡಬೇಕು: ಬಸವರಾಜ್ ಮಾಲಗತ್ತಿ - ಭಯೋತ್ಪಾದಕ ನಿಗ್ರಹ ದಳ
🎬 Watch Now: Feature Video

ಬೆಂಗಳೂರು: ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯವನ್ನ ಮಾಡಲು ಹಾಗೂ ತನ್ನ ಜಾಲವನ್ನ ವಿಸ್ತರಿಸಲು ಕೆಲ ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿವೆ. ಸದ್ಯ ರಾಜ್ಯ ಸರ್ಕಾರ ಭಯೋತ್ಪಾದಕರನ್ನು ಮಟ್ಟ ಹಾಕಲು ಎಟಿಎಸ್ (ಭಯೋತ್ಪಾದಕ ನಿಗ್ರಹ ದಳ) ವನ್ನು ರಚನೆ ಮಾಡೋದಾಗಿ ಪ್ರಕಟಣೆ ಹೊರಡಿಸಿದೆ. ಆದ್ರೆ ಎಟಿಎಸ್ ತಂಡ ಸರಿಯಾದ ರೀತಿ ಕಾರ್ಯನಿರ್ವಹಿಸಲಾಗದ ಪರಿಸ್ಥಿತಿ ರಾಜ್ಯದಲ್ಲಿದೆಯಂತೆ. ಈ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ್ ಮಾಲಗತ್ತಿ ಅವರು ಈಟಿವಿ ಭಾರತನೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.