ETV Bharat / technology

ಬಿಲಿಯನ್ ವರ್ಷಗಳ ಹಿಂದೆ ಚಂದ್ರನ ಮೇಲೆ ಜ್ವಾಲಾಮುಖಿ ಸ್ಫೋಟ: ಶಿಲಾಮಾದರಿಗಳ ಅಧ್ಯಯನದಲ್ಲಿ ಬಹಿರಂಗ - CHANGE 6 SAMPLE STUDIES

ಚೀನಾದ ಚಾಂಗ್ ಇ ನೌಕೆಯು ಭೂಮಿಗೆ ತಂದ ಚಂದ್ರನ ಶಿಲಾ ಮಾದರಿಗಳು ಅತ್ಯಂತ ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿವೆ.

ಚೀನಾದ ಚಾಂಗ್ ಇ ಬಾಹ್ಯಾಕಾಶ ನೌಕೆ
ಚೀನಾದ ಚಾಂಗ್ ಇ ಬಾಹ್ಯಾಕಾಶ ನೌಕೆ (IANS)
author img

By ETV Bharat Karnataka Team

Published : Nov 15, 2024, 7:07 PM IST

ಬೀಜಿಂಗ್: ಚೀನಾದ ಚಾಂಗ್'ಇ - 6 ಬಾಹ್ಯಾಕಾಶ ನೌಕೆಯು ಭೂಮಿಗೆ ತೆಗೆದುಕೊಂಡು ಬಂದ ಚಂದ್ರನ ಶಿಲಾ ಮಾದರಿಗಳ ಅಧ್ಯಯನ ಮುಂದುವರೆದಿದ್ದು, ಅಧ್ಗಯನದ ಇತ್ತೀಚಿನ ಫಲಿತಾಂಶಗಳನ್ನು ವಿಶ್ವದ ಪ್ರಮುಖ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಶುಕ್ರವಾರ ಪ್ರಕಟಿಸಲಾಗಿದೆ. ಚಂದ್ರನ ಕಡಿಮೆ ಪರಿಚಿತ, ದೂರದ ಭಾಗದ ಜ್ವಾಲಾಮುಖಿಗಳ ಇತಿಹಾಸವನ್ನು ಈ ಅಧ್ಯಯನಗಳು ಬಹಿರಂಗಪಡಿಸಿವೆ.

ಕೆಲವು ತಿಂಗಳ ಹಿಂದೆ ಚಂದ್ರನ ಮೇಲ್ಮೈ ಮೇಲೆ ಇಳಿದಿದ್ದ ಚಾಂಗ್'ಇ -6 ಹೊತ್ತು ತಂದ ಶಿಲಾ ಮಾದರಿಗಳು ಕ್ರಮವಾಗಿ 2.8 ಬಿಲಿಯನ್ ವರ್ಷಗಳ ಹಿಂದೆ ಮತ್ತು 4.2 ಬಿಲಿಯನ್ ವರ್ಷಗಳ ಹಿಂದೆ ಚಂದ್ರನ ದೂರದ ಭಾಗದಲ್ಲಿ ಸಂಭವಿಸಿದ ಎರಡು ಜ್ವಾಲಾಮುಖಿ ಘಟನೆಗಳನ್ನು ಸಾಕ್ಷೀಕರಿಸಿವೆ ಎಂದು ನೇಚರ್ ಜರ್ನಲ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಧ್ಯಯನದಲ್ಲಿ, ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (ಸಿಎಎಸ್) ನ ಇನ್​​​​ಸ್ಟಿಟ್ಯೂಟ್ ಆಫ್ ಜಿಯಾಲಜಿ ಅಂಡ್ ಜಿಯೋಫಿಸಿಕ್ಸ್​ನ ಸಂಶೋಧಕರು ಚಾಂಗ್'ಇ -6 ಲ್ಯಾಂಡಿಂಗ್ ಸೈಟ್​ನಲ್ಲಿ ಸಂಗ್ರಹಿಸಿದ ಚಂದ್ರನ ಮಾದರಿಗಳ 108 ಬೇಸಾಲ್ಟ್ ತುಣುಕುಗಳನ್ನು ವಿಶ್ಲೇಷಿಸಿದ್ದಾರೆ. ಸುಮಾರು 2.8 ಮಿಲಿಯನ್ ವರ್ಷಗಳ ಹಿಂದೆ 107 ತುಣುಕುಗಳು ರೂಪುಗೊಂಡಿವೆ ಎಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಇದು 2.8 ಬಿಲಿಯನ್ ವರ್ಷಗಳ ಹಿಂದಿನ ವಿಶಿಷ್ಟ ಜ್ವಾಲಾಮುಖಿ ಘಟನೆ ಬಹಿರಂಗಪಡಿಸಿದೆ. ಚಂದ್ರನ ಹತ್ತಿರದ ಭಾಗದಿಂದ ಪಡೆದ ಹಿಂದಿನ ಯಾವುದೇ ಶಿಲಾ ಮಾದರಿಗಳಲ್ಲಿ ಈ ವಿಷಯ ಕಂಡು ಬಂದಿರಲಿಲ್ಲ.

ಉಳಿದ ಒಂದು ತುಣುಕು 4.2 ಬಿಲಿಯನ್ ವರ್ಷಗಳಷ್ಟು ಹಳೆಯದಾಗಿದ್ದು, ಲ್ಯಾಂಡಿಂಗ್ ಸೈಟ್​​​ನ ದಕ್ಷಿಣದ ಪ್ರದೇಶದಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಇದು ಭೂಮಿಗೆ ತರಲಾದ ನಿಖರವಾಗಿ ನಿರ್ಧರಿಸಬಹುದಾದ ವಯಸ್ಸನ್ನು ಹೊಂದಿರುವ ಅತ್ಯಂತ ಹಳೆಯ ಚಂದ್ರ ಶಿಲಾ ಮಾದರಿಯಾಗಿದೆ ಎಂದು ಅಧ್ಯಯನ ತಿಳಿಸಿದೆ. ಸೈನ್ಸ್ ಜರ್ನಲ್​​​​​​​ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಚಂದ್ರನ ಎರಡು ಬದಿಗಳ ನಡುವಿನ ವ್ಯತ್ಯಾಸಗಳನ್ನು ತೋರಿಸಿದೆ.

ಸಿಎಎಸ್ ಅಡಿಯಲ್ಲಿನ ಗುವಾಂಗ್ಝೌ ಇನ್ ಸ್ಟಿಟ್ಯೂಟ್ ಆಫ್ ಜಿಯೋಕೆಮಿಸ್ಟ್ರಿಯ ಸಂಶೋಧಕರು ಚಾಂಗ್'ಇ -6 ಸಂಗ್ರಹಿಸಿದ ಕಡಿಮೆ - ಟೈಟಾನಿಯಂ ಶಿಲಾ ಮಾದರಿಗಳು ಸರಿಸುಮಾರು 2.83 ಬಿಲಿಯನ್ ವರ್ಷಗಳಷ್ಟು ಹಳೆಯವು ಎಂದು ದೃಢೀಕರಿಸಲು ವಿವಿಧ ತಂತ್ರಗಳನ್ನು ಬಳಸಿದ್ದಾರೆ. ಇದು ಚಂದ್ರನ ದೂರದ ಭಾಗದಲ್ಲಿ ಇತ್ತೀಚಿನ ಜ್ವಾಲಾಮುಖಿ ಚಟುವಟಿಕೆ ಸೂಚಿಸುತ್ತದೆ.

ಈ ಆವಿಷ್ಕಾರವು ಚಂದ್ರನ ಕುಳಿ ಟೈಮ್ ಲೈನ್​ಗೆ ಒಂದು ಪ್ರಮುಖ ಹಂತವನ್ನು ಸೇರಿಸುತ್ತದೆ. ಹಿಂದಿನ ಗಮನಾರ್ಹ ಇಳಿಕೆಯ ನಂತರ, ಚಂದ್ರನ ಮೇಲಿನ ಕುಳಿ ಪರಿಣಾಮಗಳ ಆವರ್ತನವು ಕನಿಷ್ಠ 2.83 ಬಿಲಿಯನ್ ವರ್ಷಗಳ ಹಿಂದಿನಿಂದ ತುಲನಾತ್ಮಕವಾಗಿ ಸ್ಥಿರವಾಗಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.

ಇದನ್ನೂ ಓದಿ : ಕೇವಲ ₹11ಕ್ಕೆ 10 GB ಹೈಸ್ಪೀಡ್​ ಡೇಟಾ! ಅತೀ ಕಡಿಮೆ ವೆಚ್ಚದ ರಿಚಾರ್ಚ್‌ ಪ್ಲಾನ್ ತಂದ ಜಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.