ಹೈದರಾಬಾದ್: ಚಿಕ್ಕ ವಯಸ್ಸಿನಲ್ಲಿಯೇ ಹೂಡಿಕೆ ಬಗ್ಗೆ ಯೋಚಿಸುವುದು ಸ್ವಲ್ಪ ಉತ್ಪ್ರೇಕ್ಷೆ ಅನಿಸಬಹುದು. ಆದರೆ, ಹೂಡಿಕೆ ಮಾಡುವುದನ್ನು ತ್ವರಿತವಾಗಿ ಪ್ರಾರಂಭಿಸಿದರೆ, ಅದು ವೃದ್ಧಿಯಾಗುವುದಕ್ಕೆ ಸಾಕಷ್ಟು ಸಮಯ ಸಿಗುತ್ತದೆ ಮತ್ತು ಅದಷ್ಟು ಬೇಗ ಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬುದು ಹಣಕಾಸು ತಜ್ಞರು ಅಭಿಪ್ರಾಯವಾಗಿದೆ.
ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸಿ: ಖರ್ಚಿಗಾಗಿ ಮಕ್ಕಳಗೆ ಒಂದಷ್ಟು ಹಣ ಕೊಡುವುದು ಸಾಮಾನ್ಯ. ಇದರಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕು. ಈ ಮೊತ್ತದಿಂದ ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಬಹುದು ಅಥವಾ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳಲ್ಲಿ ಸಿಪ್ ತೆರೆಯಬಹುದು. ಇದರಲ್ಲಿ ದೀರ್ಘಾವಧಿ ಹೂಡಿಕೆ ಮಾಡಲು ಅವಕಾಶವಿದೆ. ಆದ್ದರಿಂದ, ಮಾರುಕಟ್ಟೆಯ ಏರಿಳಿತಗಳ ನಡುವೆ ಪ್ರಯೋಜನ ಪಡೆಯುತ್ತಾರೆ. ಜೊತೆ ಮಕ್ಕಳಿಗೆ ಮಾರುಕಟ್ಟೆಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹ ಅವಕಾಶ ಇರುತ್ತದೆ.
ಆರ್ಥಿಕ ಶಿಸ್ತು: ಮಕ್ಕಳು ಚಿಕ್ಕಂದಿನಿಂದಲೇ ಹೂಡಿಕೆಯತ್ತ ಆಕರ್ಷಿತರಾದರೆ ಅವರಿಗೆ ಹಣದ ಬಗ್ಗೆ ಜ್ಞಾನ ಹೆಚ್ಚುತ್ತದೆ. ಆರ್ಥಿಕ ಶಿಸ್ತು ಬೆಳೆಯುತ್ತದೆ. ಇದರಿಂದ ಅವರು ಅನಾವಶ್ಯಕವಾಗಿ ಹಣ ಖರ್ಚು ಮಾಡಲು ಇಷ್ಟಪಡುವುದಿಲ್ಲ. ಹಣ ವೃದ್ಧಿಸಿದಂತೆ ಹೆಚ್ಚು ಹೂಡಿಕೆ ಮಾಡುವ ಯೋಚನೆ ಬರುತ್ತದೆ.
ಹೀಗೆ ಮಾಡಿ:
- 15-16 ವರ್ಷ ವಯಸ್ಸಿನ ಮಕ್ಕಳಿಗೆ ಆರ್ಥಿಕ ವಿಷಯಗಳ ಬಗ್ಗೆ ಶಿಕ್ಷಣ ನೀಡುವುದನ್ನು ಪ್ರಾರಂಭಿಸಬೇಕು. ಬ್ಯಾಂಕ್ ಖಾತೆ ತೆರೆಯುವುದರ ಜೊತೆಗೆ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಮುಂತಾದ ಹಣಕಾಸಿನ ವಿಷಯಗಳನ್ನು ಅವರೊಂದಿಗೆ ಚರ್ಚಿಸಬೇಕು. ಕೆಲವೊಮ್ಮೆ ಈ ವಿವರಗಳು ನಮಗೆ ತಿಳಿದಿಲ್ಲದಿರಬಹುದು. ಈ ಸಂದರ್ಭದಲ್ಲಿ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸಬಹುದು.
- ಹಣದ ವಿಚಾರದಲ್ಲಿ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. ಈಕ್ವಿಟಿ ಆಧಾರಿತ ಹೂಡಿಕೆಗಳಲ್ಲಿ ನಷ್ಟದ ಅಪಾಯ ಹೆಚ್ಚಾಗಿರುತ್ತದೆ. ಈ ಬಗ್ಗೆ ಮೊದಲೇ ಅವರಿಗೆ ತಿಳಿಸಿ.
- ಆರ್ಥಿಕ ವಿಷಯದಲ್ಲಿ ಅಪರಿಚಿತರ ಮಾತುಗಳನ್ನು ನಂಬಬಾರದು ಎಂದು ತಿಳಿಸಬೇಕು ಮತ್ತು ಕಡಿಮೆ ಸಮಯದಲ್ಲಿ ಕೋಟಿಗಟ್ಟಲೆ ಹಣ ಗಳಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು.
- ಸದ್ಯ ಮಾಹಿತಿ ಯುಗದಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂದು ಪತ್ತೆ ಮಾಡುವುದು ಕಷ್ಟ. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಸಲಹೆಗಳನ್ನು ಆಧರಿಸಿ ಹೂಡಿಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ಅವರಿಗೆ ವಿವರಿಸಬೇಕು.
- ಸಂಶೋಧನೆ ಮಾಡುವುದನ್ನು ಕಲಿಸಬೇಕು. ಷೇರು, ಮ್ಯೂಚುವಲ್ ಫಂಡ್ ಅನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅದರ ಬಗ್ಗೆ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ತಿಳಿಸಬೇಕು. ಅವರಿಗೆ ಈ ಬಗ್ಗೆ ಜ್ಞಾನವಿದ್ದಾಗ ಮಾತ್ರ ಹೂಡಿಕೆ ಮಾಡುವ ಆಲೋಚನೆ ಬರುತ್ತದೆ.
- ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಆಯ್ಕೆಮಾಡಿಕೊಳ್ಳಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಿ. ಆದರೆ, ಹೂಡಿಕೆ ಮಾಡುವ ಮೊದಲು ಅವುಗಳನ್ನು ಪರಿಶೀಲಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ತೆಗೆದುಕೊಳ್ಳಬೇಕು.
- ಹೂಡಿಕೆ ಮಾಡುವ ಅವಶ್ಯಕತೆ ಇಲ್ಲದೇ, ಆಟದಂತೆ ಷೇರುಗಳನ್ನು ಆಯ್ಕೆ ಮಾಡಿಕೊಂಡು, ಹೂಡಿಕೆ ಮಾಡಲು ಅವಕಾಶ ನೀಡುವ ಅನೇಕ ವರ್ಚುವಲ್ ಪ್ಲಾಟ್‌ಫಾರ್ಮ್‌ಗಳಿವೆ. ಇವುಗಳಲ್ಲಿ ಕೆಲ ವರ್ಷಗಳವರೆಗೆ ಶಿಕ್ಷಣ ಪಡೆಯಬಹುದು.
ನಿಮ್ಮ ಡಿಮ್ಯಾಟ್ ಖಾತೆಯಲ್ಲೇ ಮಕ್ಕಳಿಗಾಗಿ ಹೂಡಿಕೆ: ಅಪ್ರಾಪ್ತರ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯಬಹುದು. ಆದರೆ, ಅದಕ್ಕೆ ಹಲವು ಷರತ್ತುಗಳಿವೆ. ವಯಸ್ಕರ ಖಾತೆಯ ಮೂಲಕ ಮಕ್ಕಳಿಗಾಗಿ ಹೂಡಿಕೆ ಮಾಡಬಹುದು. ಇಲ್ಲಿ ಮಕ್ಕಳೊಂದಿಗೆ ಚರ್ಚಿಸಿ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಖಾತೆಯನ್ನು ಸಂಪೂರ್ಣವಾಗಿ ಅವರಿಗೆ ಹಸ್ತಾಂತರಿಸಬಾರದು. ನಿಮ್ಮ ಮೇಲ್ವಿಚಾರಣೆ ಅತ್ಯಗತ್ಯ. ಮಕ್ಕಳು ಮೇಜರ್ ಆದ ನಂತರ, ಅವರು ತಮ್ಮ ಹೆಸರಿನಲ್ಲಿ ತಮ್ಮದೇ ಖಾತೆಯನ್ನು ತೆರೆಯಬಹುದು. ನಂತರ ಅವರು ತಮ್ಮ ಖಾತೆಯಲ್ಲಿ ಅದೇ ಸಂಖ್ಯೆಯ ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಯುನಿಟ್ಗಳನ್ನು ಖರೀದಿಸಲು ಅವಕಾಶವಿರುತ್ತದೆ.
ಪ್ರಾರಂಭದಲ್ಲಿ ಜಾಗರೂಕರಾಗಿರಿ:
- ಷೇರು ಮಾರುಕಟ್ಟೆಯಲ್ಲಿ ಹೊಸ ಹೂಡಿಕೆಯನ್ನು ಪ್ರಾರಂಭಿಸುವಾಗ ಕೆಲವು ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು.
- ಇಂದು ಹೂಡಿಕೆ ಮಾಡಿದರೆ ನಾಳೆಯೇ ದುಪ್ಪಟ್ಟಾಗುತ್ತದೆ ಎಂದು ನಿರೀಕ್ಷಿಸಬೇಡಿ.
- ಯಾವುದೇ ಸಂದರ್ಭದಲ್ಲಿ ಎಫ್ ಅಂಡ್ ಒ ಮತ್ತು ಡೇ ಟ್ರೇಡಿಂಗ್ ಮಾಡಬೇಡಿ. ಉತ್ತಮ ಷೇರುಗಳಲ್ಲಿ ಹೂಡಿಕೆ ಮಾಡುವುದು ನಿಮ್ಮ ಗುರಿಯಾಗಲಿ
- ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ನೀವು ಲಾಭ ಗಳಿಸಿದರೆ ಸಂತಸಪಡುತ್ತೀರಿ. ಇದರಲ್ಲಿ ಕೆಲವೊಮ್ಮೆ ನಷ್ಟ ಅನುಭವಿಸಬೇಕಾಗುತ್ತದೆ ಎಂದನ್ನು ನೆನಪಿನಲ್ಲಿಡಬೇಕು. ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.
- ಸ್ನೇಹಿತರು, ಸಾಮಾಜಿಕ ಮಾಧ್ಯಮಗಳು ಇತ್ಯಾದಿಗಳಿಂದ ಹೂಡಿಕೆ ಸಲಹೆಗಳನ್ನು ನಂಬುವ ಮೊದಲು, ನೀವು ಸಂಶೋಧನೆ ಮಾಡಿ. ಹೂಡಿಕೆಯ ಅಂತಿಮ ನಿರ್ಧಾರ ನಿಮ್ಮದಾಗಿರಲಿ.
- ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಪ್ರಾರಂಭಿಸುವ ಮೊದಲು, ನೀವು ಈಟಿಎಫ್‌ಗಳು, ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಕೊಳ್ಳುವುದು ಮತ್ತು ಐಪಿಒಗಳಿಗೆ ಅರ್ಜಿ ಸಲ್ಲಿಸಬಹುದು. ಒಂದೇ ಬಾರಿಗೆ 25 ಸಾವಿರಕ್ಕಿಂತ ಹೆಚ್ಚು ಹೂಡಿಕೆ ಮಾಡಬೇಡಿ.