50 ರೂ.ಗೆ ಸ್ವೈಪ್ ಮಾಡಲು ಪೆಟ್ರೋಲ್ ಬಂಕ್ ಸಿಬ್ಬಂದಿ ಒಪ್ಪದಿದ್ದಾಗ ಈ ಹುಡುಗ್ರ ತಾಳ್ಮೆ ಕಟ್ಟೆ ಒಡೆಯಿತು - Youth assaulted on petrol bunk staff in Kodagu
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4968388-thumbnail-3x2-megha.jpg)
ಕೊಡಗು: 50 ರೂ. ಪೆಟ್ರೋಲ್‌ಗೆ ಸ್ವೈಪಿಂಗ್ ಮಾಡಲು ನಿರಾಕರಿಸಿದಕ್ಕೆ ಯುವಕರ ಗುಂಪೊಂದು ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಕುಶಾಲನಗರದ ಬ್ಲೂಮೂನ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ. ಸೋಮವಾರ ಮಧ್ಯರಾತ್ರಿ ಬೈಕ್‌ನಲ್ಲಿ ಬಂದ ಯುವಕರ ಗುಂಪು, ಬಂಕ್‌ನಲ್ಲಿ 50 ರೂ.ಗೆ ಪೆಟ್ರೋಲ್ ಹಾಕಿಸಿ ಕಾರ್ಡ್ ನೀಡಿದ್ದಾರೆ. ಅದಕ್ಕೆ ಬಂಕ್ ಸಿಬ್ಬಂದಿ 50 ರೂ.ಗೆ ಸ್ವೈಪಿಂಗ್ ಮಾಡೋಕೆ ಸಾಧ್ಯವಿಲ್ಲ ಎಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವಕರು ಸಿಬ್ಬಂದಿಗೆ ಥಳಿಸಿದ್ದಾರೆ. ಹಲ್ಲೆ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.