thumbnail

ನೆಲಮಂಗಲದಲ್ಲಿ ಮಳೆಯ ಆರ್ಭಟಕ್ಕೆ ನೆಲಕ್ಕುರುಳಿದ ಮನೆಗಳು

By

Published : Sep 10, 2020, 11:45 AM IST

ನೆಲಮಂಗಲ: ಕಳೆದ ಎರಡು ದಿನಗಳಿಂದ ನೆಲಮಂಗಲ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಎರಡು ಮನೆಗಳು ಕುಸಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನ ಶಿವಾನಂದನಗರ ಗ್ರಾಮದಲ್ಲಿ ಘಟನೆ ನಡೆದಿದ್ದು, ಶಿವಣ್ಣ ಮತ್ತು ಕೆಂಪಮ್ಮ ಎಂಬವರ ಮನೆಗಳು ನೆಲಸಮವಾಗಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರು ಪಾಲಾಗಿದ್ದು, ಆತಂಕದಲ್ಲೇ ಇಡೀ  ಕುಟುಂಬಗಳು ರಾತ್ರಿ ಕಳೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.