ಮಲೆನಾಡು ಈಗ ಮತ್ತೆ ಮಳೆನಾಡು.. ಆತಂಕದಲ್ಲಿ ಕಾಫಿನಾಡಿನ ಜನ! - Rain started again in chikkamagaluru
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರು ನಗರ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನರು ಆತಂಕಿಂತರಾಗಿದ್ದಾರೆ. 2 ತಿಂಗಳ ಹಿಂದಷ್ಟೇ ಸತತ ಒಂದು ವಾರಗಳ ಕಾಲ ಸುರಿದ ಮಹಾ ಮಳೆ ಜನರ ಬದುಕನ್ನೇ ಸರ್ವನಾಶ ಮಾಡಿತ್ತು. ಮಳೆ ಅಂದ್ರೆ ಸಾಕು, ಮಲೆನಾಡಿನ ಜನ ಭಯ ಪಡುವಂತಾಗಿದೆ. ಚಿಕ್ಕಮಗಳೂರು ನಗರ, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿಘಾಟಿ, ಬಣಕಲ್, ಬಾಳೂರು,ಜಾವಳಿ, ಕಳಸ, ಶೃಂಗೇರಿ, ಕೊಪ್ಪ ಭಾಗದಲ್ಲಿಯೂ ಬಿಡದೇ ಈ ಮಳೆ ಸುರಿಯುತ್ತಿದೆ. ನಿರಂತರ ಮಳೆಯ ಕಾರಣ ಜನ ಜೀವನ ಅಸ್ತವ್ಯಸ್ಥವಾಗಿದ್ದು, ನಗರ ಪ್ರದೇಶದ ರಸ್ತೆಯಲ್ಲಿಯೂ ವಾಹನ ಸಂಚಾರದಲ್ಲಿ ಅಸ್ತವ್ಯಸ್ಥವಾಗಿದೆ.