ಆರ್‌ಟಿಇ ಪುನರ್ ಆರಂಭ, ಖಾಸಗಿ ಶಾಲೆಗಳಿಗೆ ಅನುದಾನಕ್ಕೆ ಒತ್ತಾಯ: ಯಾದಗಿರಿಯಲ್ಲಿ ಪ್ರತಿಭಟನೆ - ಖಾಸಗಿ ಶಾಲೆಗಳಿಗೆ ಅನುದಾನಕ್ಕೆ ಒತ್ತಾಯ
🎬 Watch Now: Feature Video
ಸರ್ಕಾರದ ಮಹತ್ವಾಕಾಂಕ್ಷೆಯ ಶಿಕ್ಷಣದ ಹಕ್ಕು ಕಾಯ್ದೆ(RTE Act) ಯೋಜನೆ ಪುನರ್ ಆರಂಭ, 1995 ರಂ ನಂತರ ಆರಂಭವಾದ ಖಾಸಗಿ ಶಾಲೆಗಳಿಗೆ ಸರ್ಕಾರ ಅನುದಾನ ನೀಡಬೇಕೆಂಬ ಬೇಡಿಕೆಗಳೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಯ ಶಿಕ್ಷಕರು ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು.
ಬಡ ಮಕ್ಕಳಿಗೆ ಅನುಕೂಲವಾಗಿದ್ದ ಆರ್‌ಟಿಇ ಶಿಕ್ಷಣ ಪದ್ದತಿ ರದ್ದು ಮಾಡಿರೋದು ಖಂಡನೀಯ. ಈ ಕಾಯ್ದೆಯಡಿ ಪ್ರತಿವರ್ಷ 6.50 ಲಕ್ಷ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದರು. ಸರ್ಕಾರವೇ ಮಕ್ಕಳ ಶುಲ್ಕ ಭರಿಸುತ್ತಿತ್ತು. ಈ ಮೂಲಕ ಖಾಸಗಿ ಶಾಲೆಗಳಿಗೆ ಪ್ರೋತ್ಸಾಹ ನೀಡಿತು. ಆದರೆ, ಹಿಂದಿನ ಮೈತ್ರಿ ಸರ್ಕಾರ ಆರ್‌ಟಿಇ ಶಿಕ್ಷಣಕ್ಕೆ ತಿದ್ದುಪಡಿ ತಂದು ಬಡ ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದಿದೆ. ಕೂಡಲೇ ಸರ್ಕಾರ ಮೊದಲಿನಂತೆ ಆರ್‌ಟಿಇ ಪದ್ದತಿ ಜಾರಿಗೆ ತರಬೇಕೆಂದು ಖಾಸಗಿ ಶಾಲಾ ಮಂಡಳಿಯ ಒಕ್ಕೂಟ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
Last Updated : Dec 10, 2019, 4:47 PM IST