ಹೆಬ್ಬಾವನ್ನು ನುಂಗಲೆತ್ನಿಸಿದ ಕಾಳಿಂಗ; ಉರಗ ಪ್ರೇಮಿಯಿಂದ ಹಾವುಗಳ ರಕ್ಷಣೆ - Python
🎬 Watch Now: Feature Video
ಬೆಳ್ತಂಗಡಿ:ಸುಮಾರು 14 ಅಡಿಗಿಂತಲೂ ಉದ್ದದ ಕಾಳಿಂಗ ಸರ್ಪವೊಂದು ದೊಡ್ಡ ಗಾತ್ರದ ಹೆಬ್ಬಾವನ್ನು ನುಂಗಲೆತ್ನಿಸಿದ ಘಟನೆ ತಾಲೂಕಿನ ಕಡಿರುದ್ಯಾವರ ಸಮೀಪ ನಡೆದಿದೆ. ಕಡಿರುದ್ಯಾವರ ರವಿ ಎಂಬುವರ ತೋಟದಲ್ಲಿ ಕಾಳಿಂಗ ಸರ್ಪ ಹಾಗೂ ಹೆಬ್ಬಾವು ಸುತ್ತಾಡುತ್ತಿದ್ದನ್ನು ಗಮನಿಸಿದ ಮನೆಯವರು ಉರಗ ಪ್ರೇಮಿ ಸ್ನೇಕ್ ಅಶೋಕ್ಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಶೋಕ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.