ಜನರಲ್ಲಿ ಕೊರೊನಾ ಜಾಗೃತಿ: ಡ್ಯಾನ್ಸ್ ಮಾಡಿ ಅರಿವು ಮೂಡಿಸಿದ ಪೊಲೀಸರು - ಕೊರೊನಾ ಡ್ಯಾನ್ಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6752244-thumbnail-3x2-dance.jpg)
ಗಂಭೀರ ಸ್ವರೂಪ ಪಡೆದಿರುವ ಕೊರೊನಾ ವೈರಸ್ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಅಟ್ಟಹಾಸ ಮುಂದುವರಿಸಿದೆ. ಹೀಗಾಗಿ ಮನೆಯಿಂದ ಹೊರಬರಬೇಡಿ ಎಂದು ಸಕಲ ರೀತಿಯಿಂದಲೂ ನಾಗರಿಕರಿಗೆ ಪೊಲೀಸರು ಅರಿವು ಮೂಡಿಸುತ್ತಲೇ ಇದ್ದಾರೆ. ಇದೀಗ ರಾಜರಾಜೇಶ್ಚರಿ ನಗರ ಪೊಲೀಸರು ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸಿದ್ದಾರೆ. ’ದೂರ ಸ್ವಲ್ಪ ದೂರ ನಿಲ್ಲೋಣ ಕೊರೊನಾ ವಿರುದ್ಧ ಗೆಲ್ಲೋಣ ’ಎಂಬ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಡ್ಯಾನ್ಸ್ ಸಖತ್ ವೈರಲ್ ಆಗಿದೆ.