ತಾವರಗೇರಾ ರಸ್ತೆಯಲ್ಲಿ ಯಮ ಪ್ರತ್ಯಕ್ಷ! - ಪೊಲೀಸರು ಯವಧೂತರ ವೇಷ ತೊಟ್ಟು ಜಾಗೃತಿ
🎬 Watch Now: Feature Video
ತಾವರಗೇರಾ ಪೊಲೀಸರು ಯವಧೂತರ ವೇಷ ತೊಟ್ಟು ಕೊರೊನಾ ಜಾಗೃತಿ ಮೂಡಿಸಿದರಲ್ಲದೇ ಮಾಸ್ಕ್ ಹಾಗೂ ಹೆಲ್ಮೆಟ್ ಇಲ್ಲದೇ ಅನಗತ್ಯವಾಗಿ ಸಂಚರಿಸಿದವರಿಗೆ ನಡು ಬೀದಿಯಲ್ಲಿ ನಿಲ್ಲಿಸಿ ಮುಜುಗುರವನ್ನುಂಟು ಮಾಡಿದರು. ಹೌದು, ತಾವರಗೇರಾ ಪೊಲೀಸ್ ಠಾಣೆಯ ಪಿಎಸೈ ಗೀತಾಂಜಲಿ ಶಿಂಧೆ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಹಗಲು ವೇಷಧಾರಿಯಾಗಿ ಇದ್ದಕ್ಕಿದ್ದಂತೆ ಯಮ ಹಾಗೂ ಯಮಧೂತರು ರೀತಿಯಲ್ಲಿ ಪ್ರತ್ಯಕ್ಷರಾಗಿ ಬೇವಿನ ಎಲೆ ಹಿಡಿದು ಹಲಗೆ ವಾದನಕ್ಕೆ ತಕ್ಕಂತೆ ನೃತ್ಯ ಮಾಡಿದರು. ಪಟ್ಟಣದ ಶ್ಯಾಮೀದ ಅಲಿ ಸರ್ಕಲ್, ಮೇಗಳಪೇಟೆ, ರಜಪೂತರ ಗಲ್ಲಿ, ಹಳೆ ಪಂಚಾಯತ್, ಕುಂಬಾರ ಓಣಿ, ಸಿಂಧನೂರು ಸರ್ಕಲ್ವರೆಗೂ ಸಂಚರಿಸಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಬಗ್ಗೆ ಮನರಂಜನೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.