ಖಾನಾಪುರದಲ್ಲಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿ: ಬಿಂದಿಗೆ, ಕ್ಯಾನ್ ಹಿಡಿದು ಮುಗಿಬಿದ್ದ ಜನ! - Petrol Tanker accident at Belgavi
🎬 Watch Now: Feature Video

ಬೆಳಗಾವಿ: ಪೆಟ್ರೋಲ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಬೇಕವಾಡ ಗ್ರಾಮದ ಬಳಿ ನಡೆದಿದೆ. ಟ್ಯಾಂಕರ್ ಲಾರಿ ಪಲ್ಟಿಯಾಗುತ್ತಿದ್ದಂತೆ ಪೆಟ್ರೋಲ್ ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಸ್ಥರು ಮುಗಿಬಿದ್ದಿದ್ದರು. ದೂರ ಸರಿಯುವಂತೆ ಪೊಲೀಸರು ಹೇಳಿದರೂ ಕ್ಯಾರೆ ಎನ್ನದ ಜನ ಬಿಂದಿಗೆ, ಕ್ಯಾನ್ಗಳನ್ನು ತಂದು ಪೆಟ್ರೋಲ್ ತುಂಬಿಕೊಳ್ಳಲು ಮುಂದಾದರು. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.