ಲಾಕ್ ಡೌನ್ ಮಧ್ಯೆ ಮದ್ಯ ಮಾರಾಟಕ್ಕೆ ಯತ್ನ: ವೈನ್ಸ್ ಕ್ಯಾಶಿಯರ್ ವಿರುದ್ಧ ಗ್ರಾಮಸ್ಥರು ಗರಂ - hasana latest news
🎬 Watch Now: Feature Video
ಮದ್ಯ ಮಾರಾಟ ನಿಷೇಧವಿದ್ದರೂ ಮಾರಾಟಕ್ಕೆ ಯತ್ನಿಸಿದ ವೈನ್ಸ್ ಕ್ಯಾಶಿಯರ್‌ನನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡ ಪ್ರಸಂಗ ಹಾಸನದ ಬೀಕನಹಳ್ಳಿಯಲ್ಲಿ ನಡೆಯಿತು. ಜಿಲ್ಲೆಯ ಪ್ರಸಿದ್ಧ ಪುರದಮ್ಮ ದೇವಾಲಯದ ಬಳಿಯಿರುವ ಪೃಥ್ವಿ ವೈನ್ಸ್ ಬಳಿ ನಿನ್ನೆ ಬೆಳ್ಳಂಬೆಳಗ್ಗೆ ಸ್ಕಾರ್ಪಿಯೋ ವಾಹನದಲ್ಲಿ ಮದ್ಯದ ಬಾಕ್ಸ್ಗಳನ್ನು ತುಂಬಿಸಲಾಗುತ್ತಿತ್ತು. ಇದನ್ನು ಗಮನಿಸಿ ರೊಚ್ಚಿಗೆದ್ದ ಗ್ರಾಮಸ್ಥರು ಗಲಾಟೆ ನಡೆಸಿದ್ದಾರೆ. ಗ್ರಾಮಸ್ಥರನ್ನು ಕಂಡು ಸ್ಕಾರ್ಪಿಯೋದೊಂದಿಗೆ ವಾಹನದಲ್ಲಿದ್ದ ಜನರು ಸ್ಥಳದಿಂದ ಪರಾರಿಯಾಗಿದ್ದಾರೆ.