ಶ್ರೀಮಠದ ದಾಸೋಹಕ್ಕೆ ರೆಡಿಯಾಗ್ತಿವೆ ಶೇಂಗಾ ಹೋಳಿಗೆ - ಶ್ರೀ ಗವಿಸಿದ್ದೇಶ್ವರ ಜಾತ್ರೆ
🎬 Watch Now: Feature Video
ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಮೃಷ್ಟಾನ್ನ ಪ್ರಸಾದ ಬಡಿಸಲಾಗುತ್ತಿದೆ. ಭಕ್ತರ ಪ್ರಸಾದಕ್ಕಾಗಿ ಸಾವಿರಾರು ಭಕ್ತರು ದವಸ-ಧಾನ್ಯ, ರೊಟ್ಟಿ, ಕಾಯಿಪಲ್ಯ, ಸಿಹಿ ಪದಾರ್ಥಗಳನ್ನು ತಂದು ಶ್ರೀಮಠಕ್ಕೆ ಅರ್ಪಿಸುತ್ತಿದ್ದಾರೆ. ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಗ್ರಾಮಸ್ಥರು ಮಹಾದಾಸೋಹಕ್ಕೆ ಸಲ್ಲಿಸಲು 7 ಕ್ವಿಂಟಾಲ್ಗೂ ಅಧಿಕ ಶೇಂಗಾ ಹೋಳಿಗೆ ತಯಾರಿಸುತ್ತಿದ್ದಾರೆ. ಶೇಂಗಾ ಹೋಳಿಗೆ ಮಾಡುವ ಸ್ಥಳದಿಂದ ನಮ್ಮ ಕೊಪ್ಪಳ ಪ್ರತಿನಿಧಿ ಮಾಡಿರುವ ವಾಕ್ ಥ್ರೂ ಇಲ್ಲಿದೆ...