ಊಟಕ್ಕೂ ಹಣವಿಲ್ಲ, ಫೈನ್ ಹೇಗೆ ಕಟ್ಟಲಿ?: ಪೊಲೀಸರೊಂದಿಗೆ ಬೈಕ್ ಸವಾರನ ಕಿರಿಕ್ - ಮಾಸ್ಕ್ ಹಾಕದ ಬೈಕ್ ಸವಾರನ ಸುದ್ದಿ
🎬 Watch Now: Feature Video
ಮೈಸೂರು: ಬೈಕ್ನಲ್ಲಿ ಮಾಸ್ಕ್ ಧರಿಸದೆ ಬಂದು ಪೊಲೀಸರ ಬಳಿ ಸಿಕ್ಕಿ ಹಾಕಿಕೊಂಡ ಬೈಕ್ ಸವಾರ, ಫೈನ್ ಕಟ್ಟಲು ಆಗದೆ ಅವರೊಂದಿಗೆ ವಾಗ್ವಾದ ನಡೆಸಿ, ಕೊನೆಗೂ ನನ್ನ ಬಳಿ ಊಟಕ್ಕೂ ಹಣವಿಲ್ಲ ಎಂದು ತನ್ನ ಪರ್ಸ್ನನ್ನು ತೋರಿಸಿದ ಘಟನೆ ನಗರದ ಚಾಮರಾಜ ಜೋಡಿ ರಸ್ತೆ ಸಿಗ್ನಲ್ ಬಳಿ ನಡೆದಿದೆ. ನಗರದ ಚಾಮರಾಜಜೋಡಿ ರಸ್ತೆಯ ಸಿಗ್ನಲ್ ಬಳಿ ವ್ಯಕ್ತಿಯೊಬ್ಬ ಮಾಸ್ಕ್ ಧರಿಸದೆ ಬೈಕ್ನಲ್ಲಿ ಬಂದಿದ್ದು, ಈ ಸಂದರ್ಭದಲ್ಲಿ ಪೊಲೀಸರು ಈತನನ್ನು ತಡೆದು ಮನೆಯಿಂದ ಹೊರ ಬಂದಾಗ ಮಾಸ್ಕ್ ಹಾಕಿಕೊಂಡು ಬರುವುದು ಕಡ್ಡಾಯ, ಮಾಸ್ಕ್ ಧರಿಸದ ಕಾರಣ ಫೈನ್ ಕಟ್ಟುವಂತೆ ಆ ವ್ಯಕ್ತಿಗೆ ಹೇಳಿದ್ದಾರೆ. ಮಾಸ್ಕ್ ಏಕೆ ಧರಿಸಬೇಕು, ಫೈನ್ ಕಟ್ಟಲು ನನ್ನ ಬಳಿ ಹಣವಿಲ್ಲ, ಫೈನ್ ಕಟ್ಟುವುದಕ್ಕಿರಲಿ ನನ್ನ ಬಳಿ ಊಟ ತಿಂಡಿಗೂ ಹಣವಿಲ್ಲ, ಎಂದಿದ್ದಾನೆ. ಕೊನೆಗೂ ಪೊಲೀಸರು ಈತನಿಗೆ ಕರುಣೆ ತೋರದೆ ಇದ್ದಾಗ ಫೋನ್ನಲ್ಲಿ ಸ್ನೇಹಿತನನ್ನು ಕರೆಸಿ ಆತನ ಬಳಿ ಸಾಲ ಪಡೆದು, ಮಾಸ್ಕ್ ಫೈನ್ನನ್ನು ಕಟ್ಟಿದ್ದಾನೆ.