ಮೆಜೆಸ್ಟಿಕ್ ನಿಲ್ದಾಣದೊಳಗಿಲ್ಲ ಬಸ್‌ಗಳು; ಆಟೋರಿಕ್ಷಾಗಳ ಪ್ರವೇಶ
🎬 Watch Now: Feature Video
ಸಾರಿಗೆ ಸಿಬ್ಬಂದಿಯ ಮುಷ್ಕರಕ್ಕೆ ಪ್ರಯಾಣಿಕರು ಹೈರಾಣಾಗಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣ ಅಂದರೆ ನೂರಾರು ಬಸ್‌ಗಳು ಬಂದು ಓಡಾಡುವ ಜಾಗ. ಇವತ್ತು ಆ ಚಿತ್ರಣವೇ ಬದಲಾಗಿ ಹೋಗಿದೆ. ಹೊರ ಜಿಲ್ಲೆ, ಹೊರ ರಾಜ್ಯಗಳ ಜನರು ಬಸ್‌ಗಳಿಲ್ಲದೆ ಪರದಾಡುವ ಸ್ಥಿತಿ ಇದೆ. ಬೆಳಗ್ಗೆ 8 ಗಂಟೆಯವರೆಗೆ ಒಟ್ಟು 55 ಬಿಎಂಟಿಸಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಈಗ ನಿಲ್ದಾಣದೊಳಗೆ ಬಸ್ಗಳ ಬದಲು ಆಟೋಗಳು ನಿಂತಿವೆ. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ದೀಪಾ ವಾಸ್ತವ ಚಿತ್ರಣವನ್ನು ವಿವರಿಸಿದ್ದಾರೆ.