IPL Mega Auction: ಎರಡನೇ ದಿನದ IPL ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಆರಂಭದಲ್ಲೇ ನಾಲ್ವರು ಆಟಗಾರರು ಅನ್ಸೋಲ್ಡ್ ಆಗಿದ್ದಾರೆ. ಅನ್ಸೋಲ್ಡ್ ಆದ ಆಟಗಾರರ ಪಟ್ಟಿಯಲ್ಲಿ ಕೆಲ ಸ್ಟಾರ್ ಆಟಗಾರರು ಇದ್ದು ಅಚ್ಚರಿ ಮೂಡಿಸಿದೆ. ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸ್, ಗ್ಲೆನ್ ಫಿಲಿಪ್ಸ್, ಕೇಶವ್ ಮಹರಾಜ್, ಭಾರತದ ಅಜಿಂಕ್ಯಾ ರಹಾನೆ, ಶಾರ್ದೂಲ್ ಠಾಕೂರ್ ಅನ್ಸೋಲ್ಡ್, ಫೃಥ್ವಿ ಶಾ ಅನ್ಸೋಲ್ಡ್ ಆಗಿದ್ದಾರೆ. ಇವರೊಂದಿಗೆ ಕರ್ನಾಟಕದ ಸ್ಟಾರ್ ಆಟಗಾರನೂ ಕೂಡು ಅನ್ಸೋಲ್ಡ್ ಲಿಸ್ಟ್ಗೆ ಸೇರ್ಪಡೆ ಗೊಂಡಿದ್ದಾರೆ.
ಯಾರೂ ಖರೀದಿಸಲು ಮುಂದೆ ಬರಲೇ ಇಲ್ಲ: ಈ ಆಟಗಾರ ಒಟ್ಟು 121 ಐಪಿಎಲ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 2,665 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ 1 ಶತಕ ಮತ್ತು 13 ಅರ್ಧಶತಕ ಸಿಡಿಸಿದ್ದಾರೆ. 106 ಹೈಸ್ಕೋರ್ ಆಗಿದೆ. ಇಷ್ಟೆಲ್ಲ ಅನುಭವ ಹೊಂದಿರುವ ಇವರು ಯಾವುದೇ ತಂಡಕ್ಕೆ ಸೇರ್ಪಡೆಯಾಗಿಲ್ಲ. ಹೌದು ನಾವು ಹೇಳುತ್ತಿರುವುದು ಕರ್ನಾಟಕದ ಸ್ಟಾರ್ ಆಟಗಾರ ಮಾಯಾಂಕ್ ಅಗರ್ವಾಲ್ ಕುರಿತು. ₹1 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಇವರನ್ನು ಯಾವುದೇ ಫ್ರಾಂಚೈಸಿಗಳು, ಹರಾಜಿನಲ್ಲಿ ಖರೀದಿಸಲು ಮುಂದೆ ಬರಲಿಲ್ಲ. ಈ ಹಿನ್ನೆಲೆ ಇವರು ಅನ್ಸೋಲ್ಡ್ ಆಗಿದ್ದಾರೆ.
2011ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು; ಅಗರ್ವಾಲ್ 2011ಕ್ಕೆ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಬಳಿಕ 3 ವರ್ಷಗಳ ಕಾಲ ಅಂದರೆ 2011ರಿಂದ 13ರ ವರೆಗೆ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರೈಸಿಂಗ್ ಪೂಣೆ ಸೂಪರ್ ಜೈಂಟ್ಸ್ ತಂಡದಲ್ಲಿ ಆಡಿದ್ದರು. 2018 ರಿಂದ 22ರ ವರೆಗೆ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಒಟ್ಟು 60 ಪಂದ್ಯಗಳನ್ನು ಆಡಿದ್ದ ಅವರ 1513 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು 9 ಅರ್ಧಶತಕಗಳು ಸೇರಿವೆ. ಪ್ರಸ್ತುತ ಅವರು ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ.
RCB ಸೇರಿದ ಭುವಿ: ಇದರ ನಡುವೆಯೇ ಖಷಿಯ ವಿಚಾರವೆಂದರೆ ಭಾರತದ ಸ್ಟಾರ್ ವೇಗದ ಬೌಲರ್ ಆರ್ಸಿಬಿ ಪಾಲಾಗಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಹಲವಾರು ದಾಖಲೆಗಳನ್ನು ಬರೆದಿದರುವ ಸ್ವಿಂಗ್ ಕಿಂಗ್ ಈ ಬಾರಿ ಆರ್ಸಿಬಿ ಪರ ಕಣಕ್ಕಿಳಿಯುತ್ತಿದ್ದಾರೆ. ಹೌದು ಭುವನೇಶ್ವರ್ ಕುಮಾರ್ ಅವರನ್ನು ಆರ್ಸಿಬಿ 10.75 ಕೋಟಿ ಕೊಟ್ಟು ಖರೀದಿ ಮಾಡಿದೆ. ಈ ಮೂಲಕ ಆರ್ಸಿಬಿ ಬೌಲಿಂಗ್ ಬಲವನ್ನು ಹೆಚ್ಚಿಸಿದೆ.
ಇದನ್ನೂ ಓದಿ: IPL Mega Auction Live: ₹10.75 ಕೋಟಿಗೆ ಆರ್ಸಿಬಿ ಪಾಲಾದ ಸ್ಟಾರ್ ಬೌಲರ್!