ETV Bharat / bharat

ಅಜ್ಮೀರ್‌ ಉರುಸ್​​​ಗಾಗಿ ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಕಾಲಿಡಲಿರುವ ಪಾಕ್​ ಯಾತ್ರಿಕರ ತಂಡ: ಗುಪ್ತಚರ ಇಲಾಖೆ ಹದ್ದಿನ ಕಣ್ಣು! - AJMER URS

ಅಜ್ಮೀರ್‌ನಲ್ಲಿರುವ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾದ ವಾರ್ಷಿಕ ಉರುಸ್​ ನಡೆಯುತ್ತಿದ್ದು, ಉರುಸಿನಲ್ಲಿ ಪಾಲ್ಗೊಳ್ಳಲೆಂದು ಪಾಕಿಸ್ತಾನದ ಯಾತ್ರಿಕರ ತಂಡವೊಂದು ಇಲ್ಲಿಗೆ ಭೇಟಿ ನೀಡಿ ಚಾದರ್ ಅರ್ಪಿಸಲಿದೆ.

264 Pakistani pilgrims coming to Ajmer for Urs, PM Modi chaadar will be offers on 4th January
ಅಜ್ಮೀರ್‌ ಉರ್ಸ್​ (ETV Bharat)
author img

By ETV Bharat Karnataka Team

Published : 15 hours ago

ಅಜ್ಮೀರ್ (ರಾಜಸ್ಥಾನ): ಪ್ರತಿ ವರ್ಷದಂತೆ ಈ ವರ್ಷವೂ ಅಜ್ಮೀರ್​ನ ಖ್ಯಾತ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾದಲ್ಲಿ ವಾರ್ಷಿಕ ಉರ್ಸ್ (ಉರುಸು-ಜಾತ್ರೆ) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಯಾತ್ರಿಕರ ತಂಡವೊಂದು ಇಲ್ಲಿಗೆ ಭೇಟಿ ನೀಡಿ ವಿಶೇಷ ಪಾರ್ಥನೆ ಸಲ್ಲಿಸಲಿದೆ.

1974ರ ಭಾರತ-ಪಾಕಿಸ್ತಾನ ಶಿಷ್ಟಾಚಾರದ ಚೌಕಟ್ಟಿನಡಿ ಅಜ್ಮೀರ್ ದರ್ಗಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶವಿದ್ದು, ಅದರಂತೆ ಇಲ್ಲಿಗೆ ಭೇಟಿ ನೀಡಿ ವಿಶೇಷ ಪಾರ್ಥನೆ ಸಲ್ಲಿಸಲಿದೆ ಎಂದು ಅಜ್ಮೀರ್ ಆಡಳಿತ ಮಂಡಳಿ ತಿಳಿಸಿದೆ.

264 Pakistani pilgrims coming to Ajmer for Urs, PM Modi chaadar will be offers on 4th January
ಅಜ್ಮೀರ್‌ ಉರ್ಸ್​ (ETV Bharat)

ಉರ್ಸ್‌ನಲ್ಲಿ ಪಾಲ್ಗೊಳ್ಳಲು ಸಲುವಾಗಿ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತರು ಇಲ್ಲಿಗೆ ಭೇಟಿ ನೀಡುವುದು ಸಾಮಾನ್ಯ. ಈ ಪೈಕಿ ನೆರೆಯ ರಾಷ್ಟ್ರ ಪಾಕಿಸ್ತಾನದ ಯಾತ್ರಾರ್ಥಿಗಳ ತಂಡ ಕೂಡ ಜನವರಿ 4 ರಂದು ಭಾರತವನ್ನು ಪ್ರವೇಶ ಮಾಡಲಿದೆ. 264 ಪಾಕಿಸ್ತಾನಿ ಯಾತ್ರಾರ್ಥಿಗಳ ಗುಂಪು ಜನವರಿ 4 ರಂದು ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಕಾಲಿಡಲಿದೆ. ಮರುದಿನ ಜನವರಿ 5 ರಂದು ದೆಹಲಿಗೆ ಬರಲಿದ್ದು, ಅಲ್ಲಿಂದ ವಿಶೇಷ ರೈಲಿನ ಮೂಲಕ ಜನವರಿ 6 ರಂದು ಅಜ್ಮೀರ್ ತಲುಪಲಿದೆ. ಜನವರಿ 12 ರಂದು ಅಜ್ಮೀರ್‌ನಿಂದ ವಾಪಸ್​ ತೆರಳಲಿದೆ. ಕೇಂದ್ರೀಯ ಬಾಲಕಿಯರ ಶಾಲೆಯಲ್ಲಿ ಪಾಪ್​ ಯಾತ್ರಿಕರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಿದೆ. ಇದು ತಾತ್ಕಾಲಿಕ ವೇಳಾ ಪಟ್ಟಿಯಾಗಿದ್ದು, ಅಧಿಕೃತ ಭೇಟಿ ಬಗ್ಗೆ ಇನ್ನೂ ಪ್ರಕಟವಾಗಬೇಕಿದೆ ಎಂದು ಅಜ್ಮೀರ್ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಅಜ್ಮೀರ್​ನ ಖ್ಯಾತ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾ (ETV Bharat)

ಕಟ್ಟುನಿಟ್ಟಿನ ಕ್ರಮ: ಸಂತರ 813ನೇ ಉರ್ಸ್‌ ಇದಾಗಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ವಿಶೇಷ ದಿನ ಸ್ಥಳೀಯರು ಮಾತ್ರವಲ್ಲದೇ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯ ಜನರು ಅಜ್ಮೀರ್‌ಗೆ ಬರುತ್ತಾರೆ. ನೆರೆಯ ರಾಷ್ಟ್ರ ಪಾಕಿಸ್ತಾನದ 264 ಯಾತ್ರಿಕರ ತಂಡವೂ ಉರ್ಸ್‌ನಲ್ಲಿ ಭಾಗವಹಿಸಲು ಬರುತ್ತಿದೆ. ಪಾಕಿಸ್ತಾನಿ ಯಾತ್ರಿಗಳ ಆಗಮನದ ಹಿನ್ನೆಲೆ ಗುಪ್ತಚರ ಇಲಾಖೆ ಕೆಲವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಪಾಕ್​ನಲ್ಲಿ ಅಜ್ಮೀರ್ ಭಕ್ತರು: ಅಜ್ಮೀರ್​ನ ಸೂಫಿ ಸಂತರ ದರ್ಗಾ ಐತಿಹಾಸಿಕ ಆಧ್ಯಾತ್ಮಿಕ ಕೇಂದ್ರವಾಗಿದ್ದರಿಂದ ಪಾಕಿಸ್ತಾನದ ಪ್ರಜೆಗಳು ಕೂಡ ನಡೆದುಕೊಳ್ಳುತ್ತಾರೆ. ಪಾಕಿಸ್ತಾನದಿಂದ ಈ ಬಾರಿ ಸುಮಾರು 700 ಭಕ್ತರು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಲು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೇವಲ 264 ಪಾಕಿಸ್ತಾನಿ ಯಾತ್ರಾರ್ಥಿಗಳಿಗೆ ಮಾತ್ರ ವೀಸಾ ನೀಡಲಾಗಿದೆ. ಪಾಕಿಸ್ತಾನಿ ಯಾತ್ರಾರ್ಥಿಗಳು ಪಾಕಿಸ್ತಾನ ಸರ್ಕಾರ ಮತ್ತು ಜನರ ಪರವಾಗಿ ದರ್ಗಾದಲ್ಲಿ ಚಾದರ್ ಅರ್ಪಿಸುವುದು ವಾಡಿಕೆ. ಅದರಂತೆ ಈ ಬಾರಿಯೂ ಪಾಕಿಸ್ತಾನಿ ಯಾತ್ರಿಕರು ಅಜ್ಮೀರ್ ದರ್ಗಾದಲ್ಲಿ ಚಾದರ್ ಸಲ್ಲಿಸಲಿದ್ದಾರೆ.

ಪ್ರಧಾನಿ ಮೋದಿ ಭೇಟಿ: 813ನೇ ಉರ್ಸ್ ಹಿನ್ನೆಲೆ ಜನವರಿ 4 ರಂದು ಪ್ರಧಾನಿ ನರೇಂದ್ರ ಮೋದಿ ಕೂಡ ದರ್ಗಾಕ್ಕೆ ಭೇಟಿ ನೀಡಲಿದ್ದು, ಅವರು ಕೂಡ ಚಾದರ್ ಅರ್ಪಿಸಲಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಬಗ್ಗೆ ವಿಷಯ ಹಂಚಿಕೊಂಡಿರುವುದಾಗಿ ಅಜ್ಮೀರ್ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಇದನ್ನೂ ಓದಿ: ವಿಡಿಯೋ ನೋಡಿ... ಅಜ್ಮೀರ್​​ನ ಸಂತ ಖ್ವಾಜಾ ಗರೀಬ್ ದರ್ಗಾಕ್ಕೆ ರೆಡ್ಡಿ ಭೇಟಿ.! - Khwaja Garib Nawaz dargah in Ajmer

ETV Bharat Logo

Copyright © 2024 Ushodaya Enterprises Pvt. Ltd., All Rights Reserved.