ಬೆಂಗಳೂರು: ಬಿಎಂಟಿಸಿ ಡಿ.31ರಂದು ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವರ ಅನುಕೂಲಕ್ಕಾಗಿ ಎಂ.ಜಿ ರೋಡ್‌ನಿಂದ ನಗರದ ವಿವಿಧ ಭಾಗಗಳಿಗೆ ರಾತ್ರಿ 11 ರಿಂದ ಜ.1ರ ನಸುಕಿನ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಸೌಲಭ್ಯವನ್ನು ನೀಡಲು ಮುಂದಾಗಿದೆ.
ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ ಮತ್ತು ಜಂಕ್ಷನ್ಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ಗಳಿಂದ ಪ್ರಯಾಣಿಕರ ದಟ್ಟಣೆ, ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಕ್ರಮ ಕೈಗೊಂಡಿದೆ.
ಮಾರ್ಗಗಳ ಮಾಹಿತಿ:
ಮಾರ್ಗ ಸಂಖ್ಯೆೆ | ಎಲ್ಲಿಂದ | ಎಲ್ಲಿಗೆ |
ಎ-3 | ಬ್ರಿಗೇಡ್ ರಸ್ತೆ | ಎಲೆಕ್ಟ್ರಾನಿಕ್ ಸಿಟಿ |
ಎ-4 | ಬ್ರಿಗೇಡ್ ರಸ್ತೆ | ಜಿಗಣಿ |
ಎ-2 | ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ | ಸರ್ಜಾಪುರ |
ಎ-6 | ಕೆಂಗೇರಿ | ಕೆ.ಎಚ್.ಬಿ ಕ್ವಾಟ್ರಸ್ |
ಎ-7 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಜನಪ್ರಿಯ ಟೌನ್ ಶಿಪ್ |
ಎ-8 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ನೆಲಮಂಗಲ |
ಎ-9 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಯಲಹಂಕ ಉಪನಗರ 5ನೇ ಹಂತ |
ಎ-10 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಯಲಹಂಕ |
ಎ-11 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಬಾಗಲೂರು |
317-ಎ | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಹೊಸಕೋಟೆ |
ಎಸ್‌ಬಿಎಸ್-13ಕೆ | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಚನ್ನಸಂದ್ರ |
ಎಸ್‌ಬಿಎಸ್-1ಕೆ | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಕಾಡುಗೋಡಿ |
13 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಬನಶಂಕರಿ |
ಇದನ್ನೂ ಓದಿ: ಹೊಸ ವರ್ಷ: ನಮ್ಮ ಮೆಟ್ರೋ ಸಂಚಾರದ ಅವಧಿ ವಿಸ್ತರಣೆ