ETV Bharat / state

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಡಿ. 31ರ ರಾತ್ರಿ ವಿವಿಧೆಡೆ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು - TRAFFIC ARRANGEMENTS CHANGE

ಹೊಸ ವರ್ಷಾಚರಣೆಗಾಗಿ ಕೆಲವು ರಸ್ತೆಗಳಲ್ಲಿ ಹೆಚ್ಚಿನ ಜನ ಸೇರುವ ಕಾರಣ ಪೊಲೀಸ್​ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದೆ.

Bengaluru
ಬೆಂಗಳೂರು (ETV Bharat)
author img

By ETV Bharat Karnataka Team

Published : 15 hours ago

ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರದ 100 ಫೀಟ್ ರಸ್ತೆ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿರುವ ಕಾರಣ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನಗರದ ಹಲವೆಡೆ ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ. ಡಿ.31ರ ರಾತ್ರಿ 8 ಗಂಟೆಯಿಂದ ಜನವರಿ 1ರ ಮುಂಜಾನೆ 2 ಗಂಟೆಯವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಪೊಲೀಸ್ ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳಿಗೆ ಪ್ರವೇಶಕ್ಕೆ ನಿರ್ಬಂಧವಿರಲಿದೆ.

ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಎಂ.ಎನ್.ಅನುಚೇತ್ (ETV Bharat)

1. ಬ್ರಿಗೇಡ್ ರಸ್ತೆ

ಪ್ರವೇಶ ನಿರ್ಬಂಧಿತ ರಸ್ತೆಗಳು:

  • ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್‌ವರೆಗೆ
  • ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್‌ವರೆಗೆ
  • ಚರ್ಚ್ ಸ್ಟ್ರೀಟ್‌ನ ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ
  • ಮ್ಯೂಸಿಯಂ ರಸ್ತೆಯ ಎಂ.ಜಿ.ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದವರೆಗೆ
  • ರೆಸ್ಟ್ ಹೌಸ್ ರಸ್ತೆಯ ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್‌ವರೆಗೆ
  • ರೆಸಿಡೆನ್ಸಿ ಕ್ರಾಸ್ ರಸ್ತೆಯ ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರ)

ನಿಲುಗಡೆ ನಿಷೇಧಿಸಲಾದ ಸ್ಥಳಗಳು:

  • ಎಂ.ಜಿ ರಸ್ತೆಯ ಅನಿಲ್ ಕುಂಬ್ಳೆ ವೃತದಿಂದ ಟ್ರಿನಿಟಿ ವೃತ್ತದವರೆಗೆ
  • ಬ್ರಿಗೇಡ್ ರಸ್ತೆಯಲ್ಲಿ, ಆರ್ಟ್ಸ್ & ಕ್ರಾಫ್ಟ್ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್‌ವರೆಗೆ
  • ಚರ್ಚ್ ಸ್ಟ್ರೀಟ್‌ನ ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಸೈಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್‌ವರೆಗೆ
  • ರೆಸ್ಟ್ ಹೌಸ್ ರಸ್ತೆಯ ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ
  • ಮ್ಯೂಸಿಯಂ ರಸ್ತೆಯ ಎಂ.ಜಿ ರಸ್ತೆ ಜಂಕ್ಷನ್‌ನಿಂದ ಹಳೆ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದವರೆಗೆ

ಸಂಚಾರಕ್ಕೆ ಪರ್ಯಾಯ ಮಾರ್ಗಗಳು‌‌:

(ಡಿಸೆಂಬರ್ 31ರ ರಾತ್ರಿ 8 ಗಂಟೆಯ ನಂತರ) ಎಂ.ಜಿ ರಸ್ತೆಯ ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗೂ ಇನ್ನೂ ಮುಂದಕ್ಕೆ ಹೋಗುವಂತಹ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ - ಬಿ.ಆರ್.ಪಿ ಜಂಕ್ಷನ್ ಬಳಿ ಬಲ ತಿರುವು ಕಬ್ಬನ್ ರಸ್ತೆ ಮೂಲಕ ಸಂಚರಿಸಿ ವೆಬ್ ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಿ ಮುಂದೆ ಸಾಗಬಹುದು.

ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆಗೆ ಸಾಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ - ಡಿಕನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗಬಹುದು.

ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲತಿರುವು ಪಡೆದು, ಎ.ಎಸ್.ಸಿ. ಸೆಂಟರ್‌ನಲ್ಲಿ ಎಡತಿರುವು ಪಡೆದು ಟ್ರಿನಿಟಿ ಮೂಲಕ ಮುಂದೆ ಸಾಗಬಹುದು.

ಹೆಚ್.ಎ.ಎಲ್. ಕಡೆಯಿಂದ ಬರುವ ವಾಹನಗಳು ಎ.ಎಸ್.ಸಿ ಸೆಂಟರ್‌ನಲ್ಲಿ ಬಲತಿರುವು ಪಡೆದು ಟ್ರಿನಿಟಿ ಮೂಲಕ ಮುಂದೆ ಸಾಗಬಹುದು.

ಪಾರ್ಕಿಂಗ್ ವ್ಯವಸ್ಥೆ:

  • ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್‌ನ 1ನೇ ಮಹಡಿ
  • ಯು.ಬಿ.ಸಿಟಿ
  • ಗರುಡಾ ಮಾಲ್
  • ಕಬ್ಬನ್‌ ಪಾರ್ಕ್ (ಬಾಲಭವನ)

ಕ್ಯಾಬ್/ಆಟೋ ಪಿಕ್ ಅಪ್ ಸ್ಥಳಗಳು:

  • ಬಿ.ಆರ್.ವಿ ಜಂಕ್ಷನ್ ಹತ್ತಿರ, ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ 6
  • ಸಿಟಿಓ ಜಂಕ್ಷನ್

ಕ್ಯಾಬ್/ಆಟೋ ಡ್ರಾಪ್ ಅಪ್ ಸ್ಥಳಗಳು:

  • ಕಬ್ಬನ್ ಪಾರ್ಕ್ ಮೆಟ್ರೋ
  • ಕ್ವೀನ್ಸ್ ಜಂಕ್ಷನ್
  • ಸಿಟಿಓ‌ ಜಂಕ್ಷನ್

2. ಇಂದಿರಾ ನಗರ

ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು (ರಸ್ತೆಯ ಎರಡೂ ಬದಿಯಲ್ಲಿ):

  • 100 ಫೀಟ್ ರಸ್ತೆಯ ಹಳೆ ಮದ್ರಾಸ್ ರಸ್ತೆ ಜಂಕ್ಷನ್‌ನಿಂದ ದೊಮ್ಮಲೂರು ಫ್ಲೈಓವರ್ ಜಂಕ್ಷನ್‌ವರೆಗೆ
  • ಇಂದಿರಾನಗರ 12ನೇ ಮುಖ್ಯ ರಸ್ತೆಯ 80 ಫೀಟ್ ರಸ್ತೆಯಿಂದ ಡಬಲ್ ರೋಡ್ ಜಂಕ್ಷನ್‌ವರೆಗೆ

ಕ್ಯಾಬ್/ಆಟೋ ಪಿಕ್ ಅಪ್ ಸ್ಥಳಗಳು:

ಬಿ.ಎಂ.ಶ್ರೀ ಜಂಕ್ಷನ್

ಕ್ಯಾಬ್ / ಆಟೋ ಡ್ರಾಪ್ ಅಪ್ ಸ್ಥಳಗಳು:

  • 17ನೇ ಮುಖ್ಯರಸ್ತೆ ಜಂಕ್ಷನ್

3. ಕೋರಮಂಗಲ

ವಾಹನ ಸಂಚಾರ ನಿರ್ಬಂಧಿತ ರಸ್ತೆಗಳು:

  • ನ್ಯಾಷನಲ್ ಗೇಮ್ಸ್ ವಿಲೇಜ್‌ನಿಂದ ಯುಕೋ ಬ್ಯಾಂಕ್ ಜಂಕ್ಷನ್‌ವರೆಗೆ ಎರಡೂ ಬದಿ
  • ಕೋರಮಂಗಲ ವೈ.ಡಿ ಮಠ ರಸ್ತೆಯ ಸುಖಸಾಗರ ಜಂಕ್ಷನ್‌ನಿಂದ ಮೈಕ್ರೋಲ್ಯಾಂಡ್ ಜಂಕ್ಷನ್‌ವರೆಗೆ
  • ಜೆ.ಎನ್.ಸಿ ರಸ್ತೆ, 4ನೇ ಬಿ ಕ್ರಾಸ್ ರಸ್ತೆ, ಟಾನಿಕ್ ಹಿಂಭಾಗದ ರಸ್ತೆ, 17ನೇ ಹೆಚ್ ಮುಖ್ಯ ರಸ್ತೆಗಳಲ್ಲಿ

ಪರ್ಯಾಯ ಸಂಚಾರಿ ಮಾರ್ಗಗಳು:

ಆಡುಗೋಡಿ ಜಂಕ್ಷನ್ ಕಡೆಯಿಂದ ಯುಕೋ ಬ್ಯಾಂಕ್ ಜಂಕ್ಷನ್ ಮುಖಾಂತರ ಎನ್.ಜಿ.ವಿ ಜಂಕ್ಷನ್, ಸೋನಿವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಯುಕೋಬ್ಯಾಂಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆಯದೇ ಮಡಿವಾಳ ಚೆಕ್ ಪೋಸ್ಟ್ ಕಡೆಗೆ ಸಾಗಿ ವಾಟರ್ ಟ್ಯಾಂಕ್ ಜಂಕ್ಷನ್ ಮೂಲಕ ಸೋನಿವರ್ಲ್ಡ್ ಜಂಕ್ಷನ್, ಎನ್.ಜಿ.ವಿ ಜಂಕ್ಷನ್ ಕಡೆಗೆ ಸಾಗುವುದು.

ಮಡಿವಾಳ ಕಡೆಯಿಂದ ಯುಕೋಬ್ಯಾಂಕ್ ಜಂಕ್ಷನ್ ಮೂಲಕ ಎನ್.ಜಿ.ವಿ ಜಂಕ್ಷನ್, ಸೋನಿವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಯುಕೋಬ್ಯಾಂಕ್ ಜಂಕ್ಷನ್‌ ಕಡೆ ಹೋಗದೆ ಐಯ್ಯಪ್ಪ ಜಂಕ್ಷನ್, ವಾಟರ್ ಜಂಕ್ಷನ್ ಮುಖಾಂತರ ಅಥವಾ ಮಡಿವಾಳ ಸಂತೆಬೀದಿ, ಕೃಪಾನಿಧಿ ಜಂಕ್ಷನ್, ಐಶ್ವರ್ಯ ಜಂಕ್ಷನ್, ವಿಪ್ರೋ ಜಂಕ್ಷನ್ ಮುಖಾಂತರ ಸೋನಿವರ್ಲ್ಡ್ ಜಂಕ್ಷನ್, ಎನ್.ಜಿ.ವಿ ಜಂಕ್ಷನ್ ಕಡೆಗೆ ಸಾಗಬಹುದು.

ಟ್ರಾಫಿಕ್ ಡೈವರ್ಷನ್ ಸ್ಥಳಗಳು:

  • ಯುಕೋ ಬ್ಯಾಂಕ್ ಜಂಕ್ಷನ್
  • ಸುಖಸಾಗರ್ ಜಂಕ್ಷನ್
  • ಚೌಡೇಶ್ವರಿ ದೇವಸ್ಥಾನದ ಜಂಕ್ಷನ್

ವಾಹನ‌ ನಿಲುಗಡೆ ನಿಷೇಧಿತ ಸ್ಥಳಗಳು:

  • 80 ಫೀಟ್ ರಸ್ತೆಯ ಯುಕೋ ಬ್ಯಾಂಕ್ ಜಂಕ್ಷನ್‌ನಿಂದ ಎನ್.ಜಿ.ವಿ ಬ್ಯಾಕ್ ಗೇಟ್ ಜಂಕ್ಷನ್‌ವರೆಗೆ (ರಸ್ತೆಯ ಎರಡೂ ಕಡೆ)
  • ಸೋಮೇಶ್ವರ ದೇವಸ್ಥಾನದ ರಸ್ತೆ (ಸ್ಮಶಾನ ಕ್ರಾಸ್‌ನಿಂದ - ಮೈಕ್ರೋಲ್ಯಾಂಡ್ ಜಂಕ್ಷನ್‌ವರೆಗೆ

ವಾಹನಗಳ ನಿಲುಗಡೆಗೆ ಸ್ಥಳಗಳು:

  • 60 ಫೀಟ್ ಮಾದರಿ ರಸ್ತೆ ಎಡಭಾಗ (ಮುನಿರೆಡ್ಡಿ ಕಲ್ಯಾಣ ಮಂಟಪದಿಂದ ಕೆನರಾ ಬ್ಯಾಂಕ್ ಜಂಕ್ಷನ್‌ ವರೆಗೆ)
  • ಮುನಿರೆಡ್ಡಿ ಕಲ್ಯಾಣ ಮಂಟಪದ ಎದರುಗಡೆಯ ಬಿಬಿಎಂಪಿ ಮೈದಾನ
  • ಬೆಥನಿ ಶಾಲೆ ಪಕ್ಕದ ಬಿಬಿಎಂಪಿ ಮೈದಾನ

ಕ್ಯಾಬ್/ಆಟೋ ಪಿಕ್ ಅಪ್ ಸ್ಥಳಗಳು:

  • ನೆಕ್ಸಸ್ ಮಾಲ್
  • ಯುಕೋ‌ ಬ್ಯಾಂಕ್ ಸರ್ವಿಸ್ ರಸ್ತೆ‌
  • ಸುಖಸಾಗರ ಜಂಕ್ಷನ್
  • ಎನ್.ಜಿ.ವಿ ಬ್ಯಾಕ್ ಗೇಟ್ ಜಂಕ್ಷನ್

ಕ್ಯಾಬ್ / ಆಟೋ ಡ್ರಾಪ್ ಅಪ್ ಸ್ಥಳಗಳು:

  • ನೆಕ್ಸಸ್ ಮಾಲ್
  • ಯೂಕೋ ಬ್ಯಾಂಕ್
  • ಸುಖಸಾಗರ ಜಂಕ್ಷನ್
  • ಎನ್.ಜಿ.ವಿ ಬ್ಯಾಕ್ ಗೇಟ್ ಜಂಕ್ಷನ್

4. ಮಾಲ್ ಆಫ್ ಏಷ್ಯಾ, ಓರಾಯನ್ ಮಾಲ್ ಮತ್ತಿತರ ಸ್ಥಳಗಳು

ವಾಹನ ನಿಲುಗಡೆ ನಿಷೇಧ:

  • ಬ್ಯಾಟರಾಯನಪುರ ಸರ್ವಿಸ್ ರಸ್ತೆ - ಮಾಲ್ ಆಫ್ ಏಷ್ಯಾ ಮುಂದೆ ಕೊಡಿಗೇಹಳ್ಳಿ ಸಿಗ್ನಲ್ ನಿಂದ ಆಲ್ಲಾಳಸಂದ್ರ ಜಂಕ್ಷನ್‌ವರೆಗೆ
  • ಡಾ. ರಾಜ್ ಕುಮಾರ್ ರಸ್ತೆಯ ನವರಂಗ್ ಸಿಗ್ನಲ್ ನಿಂದ ಓರಾಯನ್ ಮಾಲ್ ಮುಂದೆ ಸೋಪ್ ಫ್ಯಾಕ್ಟರಿವರೆಗೆ
  • ವೆಸ್ಟ್ ಆಫ್ ಕಾರ್ಡ್ ರಸ್ತೆ - ಶೆಲ್ ಪಟ್ರೋಲ್ ಬಂಕ್ ನಿಂದ ರಾಜಾಜಿನಗರ 1ನೇ ಬ್ಲಾಕ್

ಸಂಚಾರ ನಿರ್ಬಂಧಿತ ಸ್ಥಳಗಳು:

ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ ಮುಂಜಾನೆ ಬೆಳಿಗ್ಗೆ 6ರವರೆಗೆ ನಗರದ ಎಲ್ಲಾ ಮೇಲ್ಸೇತುವೆಗಳ ಮೇಲೆ (ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಹೊರತುಪಡಿಸಿ) ಸಂಚಾರಕ್ಕೆ ನಿರ್ಬಂಧ.

ಡಿಸೆಂಬರ್ 31ರ ರಾತ್ರಿ 10 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6ವರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ.

ಅಲ್ಲದೆ ಮದ್ಯಪಾನ/ಮಾದಕ ದ್ರವ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರ ಪತ್ತೆಗೆ ರಾತ್ರಿ ಇಡೀ ಬೇರೆ ಬೇರೆ ಸ್ಥಳಗಳಲ್ಲಿ ತಪಾಸಣೆ ಮಾಡುವ ಚೆಕ್ ಪಾಯಿಂಟ್‌ಗಳನ್ನು ಹಾಕಲಾಗಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತಿವೇಗ ಮತ್ತು ಆಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಹಾಗೂ ವ್ಹೀಲಿಂಗ್/ಡ್ರಾಗ್ ರೇಸ್​ಗಳಲ್ಲಿ ಭಾಗಿಯಾಗಿ ಇತರೆ ಸಾರ್ವಜನಿಕರಿಗೆ ಅನಾನುಕೂಲ ಮಾಡುವಂತಹ ಮೋಟಾರ್ ಸೈಕಲ್ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರಿ ಪೊಲೀಸರು ಎಚ್ಚರಿಕೆ ರವಾನಿಸಿದ್ದಾರೆ.

ನೋ-ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ಅನಧಿಕೃತವಾಗಿ ನಿಲ್ಲಿಸಿದ್ದಲ್ಲಿ ಅಂತಹವುಗಳನ್ನು ಟೋ- ಮಾಡಲಾಗುವುದು. ಸಾರ್ವಜನಿಕರು ತಮ್ಮ ಸ್ವಂತ ವಾಹನಗಳನ್ನು ಬಳಸದೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ನಮ್ಮ ಮೆಟ್ರೋ, ಬಿಎಂಟಿಸಿ, ಕೆಎಸ್ಆರ್​ಟಿಸಿ, ಆಟೋ ಅಥವಾ ಕ್ಯಾಬ್‌ಗಳನ್ನು ಬಳಸುವಂತೆ ಕೋರಲಾಗಿದೆ.

ಇದನ್ನೂ ಓದಿ: ಜನವರಿ 1ರಿಂದ ಏನೆಲ್ಲ ಬದಲಾವಣೆ?: ಯಾವೆಲ್ಲ ರೂಲ್ಸ್​ ಚೇಂಜ್​​, ಇದಕ್ಕೆಲ್ಲ ಈಗಲೇ ಸಿದ್ಧರಾಗಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.