Sunil Gavaskar On Pant: ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ರಿಷಬ್ ಪಂತ್ ವಿರುದ್ಧ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಮೆಲ್ಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ 26ರನ್ ಗಳಿಸಿ ಬೋಲ್ಯಾಂಡ್ ಬೌಲಿಂಗ್ನಲ್ಲಿ ಔಟಾದರು. ಆದರೆ ಮನ ಬಂದಂತೆ ಬ್ಯಾಟ್ ಬೀಸಿದ ಪಂತ್ ಅನಗತ್ಯವಾಗಿ ವಿಕೆಟ್ ಒಪ್ಪಿಸಿದ್ದು ಗವಾಸ್ಕರ್ ಕೋಪಕ್ಕೆ ಕಾರಣವಾಗಿದೆ.
ಈ ಪಂದ್ಯದಲ್ಲಿ ಪಂತ್ ಎರಡು ಬಾರಿ ಔಟಾಗುವ ಅಪಾಯದಿಂದ ಪಾರಾಗಿದ್ದರು. 2 ರನ್ ಗಳಿಸಿದ್ದಾಗ ಕ್ಯಾಚ್ ನಿಂದ ಪಾರಾದ ಪಂತ್ ನಂತರ ರನೌಟ್ ಅಪಾಯದಿಂದಲೂ ಪಾರಾಗಿದ್ದರು. ಎರಡು ಬಾರಿ ಜೀವದಾನ ಪಡೆದರೂ ಸುಧಾರಿಸಿಕೊಳ್ಳದ ಪಂತ್ ಬೋಲ್ಯಾಂಡ್ ಎಸೆದ 56ನೇ ಓವರ್ನ ನಾಲ್ಕನೇ ಎಸೆತದಲ್ಲಿ ಸ್ಕೂಪ್ ಶಾಟ್ ಆಡಲು ಹೋಗಿ ನೇರವಾಗಿ ಥರ್ಡ್ ಮ್ಯಾನ್ ಕಡೆ ಫೀಲ್ಡಿಂಗ್ ಮಾಡುತ್ತಿದ್ದ ನಾಥನ್ ಲಿಯಾನ್ ಕೈಗೆ ಕ್ಯಾಚಿತ್ತರು.
ರಿಷಬ್ ಔಟಾದ ರೀತಿಗೆ ಸುನಿಲ್ ಗವಾಸ್ಕರ್ ಕೋಪಗೊಂಡರು. ಸ್ಟುಪಿಡ್.. ಸ್ಟುಪಿಡ್.. ಸ್ಟುಪಿಡ್’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಲೈವ್ ಕಾಮೆಂಟರಿಯಲ್ಲಿ ಟೀಕಿಸಿದರು. ನಿಮ್ಮ ಶಾಟ್ ಆಯ್ಕೆ ತುಂಬಾ ಕೆಟ್ಟದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತ ತಂಡ ಅಂತಹ ಹೊಡೆತವನ್ನು ಆಡುವ ಸ್ಥಿತಿಯಲ್ಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸುನೀಲ್ ಗವಾಸ್ಕರ್ ಏನು ಹೇಳಿದ್ದು; ಕಾಮೆಂಟರಿ ವೇಳೆ, ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್. ಅಲ್ಲಿ ಫೀಲ್ಡರ್ ಇರುವುದು ಗೊತ್ತಿದ್ದರೂ, ನೀವು ಅದೇ ಶಾಟ್ ಅನ್ನು ಆಡಲು ಯತ್ನಿಸಿದ್ದೀರಿ. ಹಿಂದಿನ ಬೌಲ್ನಲ್ಲೂ ಹೀಗೆ ಆಡಿ ಮಿಸ್ ಆಗಿದ್ರಿ. ಆದರೆ ಆಗ ಅಲ್ಲಿ ಯಾರೂ ಇರಲಿಲ್ಲ. ಆ ನಂತರ ಕ್ಷೇತ್ರರಕ್ಷಣೆಗಾಗಿ ಅಲ್ಲಿ ಫೀಲ್ಡರ್ಗಳನ್ನು ಹಾಕಿದರು. ಆದ್ರೂ ಅದೇ ಶಾಟ್ ಆಡುವ ಅವಶ್ಯಕತೆ ಏನಿತ್ತು".
Sunil Gavaskar was 2 seconds away from saying " kaan mein daal le gabba ka ghamand" pic.twitter.com/qeaUyyCTsZ
— Sagar (@sagarcasm) December 28, 2024
"ತಂಡದ ಪರಿಸ್ಥಿತಿ ಸರಿಯಿಲ್ಲದಿದ್ದಾಗ ಈ ರೀತಿ ಆಡಬಾರದು. ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಆಟವಾಡುವುದು ಬಹಳ ಮುಖ್ಯ. ಇದು ನಿಮ್ಮ ಸಹಜ ಆಟ ಎಂದು ಹೇಳಬೇಡಿ. ಅಲ್ಲದೇ ಈ ರೀತಿ ಆಡುವಂತಹ ಸ್ಥಿತಿಯಲ್ಲಿ ತಂಡವೂ ಇರಲಿಲ್ಲ. ಇಂತಹ ಸಮಯದಲ್ಲಿ ಅತ್ಯಂತ ಸ್ಟುಪಿಡ್ ಶಾಟ್ ಅನ್ನು ಆಯ್ಕೆ ಮಾಡಿ ಔಟಾಗಿದ್ದೀರಿ. ಇದು ತಂಡದ ಮೇಲೆ ಮತ್ತಷ್ಟು ಒತ್ತಡವನ್ನು ತರುತ್ತದೆ" ಎಂದು ಗವಾಸ್ಕರ್ ಕಿಡಿಕಾರಿದರು.
ಪಂತ್ ಔಟಾದ ವೇಳೆ ಭಾರತ 191ರನ್ ಗಳಿಸಿತ್ತು. ಆಗ ಟೀಂ ಇಂಡಿಯಾ ಫಾಲೋ ಆನ್‌ನಿಂದ ಹೊರಬರಲು ಇನ್ನೂ 84 ರನ್‌ಗಳ ಅಗತ್ಯವಿತ್ತು. ಇದರಿಂದಾಗಿ ಗವಾಸ್ಕರ್ ಪಂತ್ ಮೇಲೆ ಕಿಡಿಕಾರಿದರು.
ಇದನ್ನೂ ಓದಿ: ನಿತೀಶ್ ರೆಡ್ಡಿ, ಪ್ಲವರ್ ಅಲ್ಲ ವೈಲ್ಡ್ ಫೈರ್.!: ಶತಕ ಸಿಡಿಸಿ ದಾಖಲೆ ಸೃಷ್ಟಿಸಿದ ಯುವ ದಾಂಡಿಗ!