IPL Mega Auction: ಭಾನುವಾರದ ಮೊದಲ ದಿನದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಒಟ್ಟು 72 ಆಟಗಾರರು ಮಾರಾಟವಾಗಿದ್ದಾರೆ.
ಅದರಲ್ಲೂ, ಮೊದಲ ದಿನ ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಹೆಚ್ಚಿನ ಮೊತ್ತಕ್ಕೆ ಹರಾಜಾಗಿರುವ ಆಟಗಾರರೆನಿಸಿಕೊಂಡಿದ್ದಾರೆ.
ಪಂತ್ ₹27 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್‌ಗೆ ಮಾರಾಟವಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇವರ ಬಳಿಕ ಎರಡನೇ ದುಬಾರಿ ಆಟಗಾರನಾಗಿ ಶ್ರೇಯಸ್ ಅಯ್ಯರ್ ಇದ್ದಾರೆ. ಇವರು ₹26.75 ಕೋಟಿಗೆ ಹರಾಜಾಗುವ ಮೂಲಕ ಜಾಕ್ಪಾಟ್ ಹೊಡೆದಿದ್ದಾರೆ. ಉಳಿದಂತೆ, ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ ₹23.75 ಕೋಟಿಗೆ ಖರೀದಿಸಿದೆ.
ಮೊದಲ ದಿನದ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಒಟ್ಟು7 ಆಟಗಾರರನ್ನು ಖರೀದಿಸಿದರೆ, ಪಂಜಾಬ್ ಕಿಂಗ್ಸ್ 10, ಕೋಲ್ಕತ್ತಾ ನೈಟ್ ರೈಡರ್ಸ್ 7, ಗುಜರಾತ್ ಟೈಟಾನ್ಸ್ 9, ಡೆಲ್ಲಿ ಕ್ಯಾಪಿಟಲ್ಸ್ 9, ರಾಜಸ್ತಾನ ರಾಯಲ್ಸ್ 5, ರಾಯಲ್ ಚಾಲೆಂಜರ್ಸ್ ಬೆಂಗಳೂರು 6, ಮುಂಬೈ ಇಂಡಿಯನ್ಸ್ 4, ಸನ್‌ರೈಸರ್ಸ್ ಹೈದರಾಬಾದ್ 8, ಚೆನ್ನೈ ಸೂಪರ್ ಕಿಂಗ್ಸ್ 7 ಆಟಗಾರರನ್ನು ಖರೀದಿಸಿವೆ.
ಸೋಮವಾರ (ಇಂದು) ಎರಡನೇ ದಿನದ ಹರಾಜು ನಡೆಯಲಿದ್ದು, ಇದಕ್ಕೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಪರ್ಸ್‌ನಲ್ಲಿ ಎಷ್ಟು ಹಣ ಉಳಿಸಿಕೊಂಡಿವೆ ಎಂಬುದನ್ನು ನೋಡೋಣ.
10 ತಂಡಗಳ ಪರ್ಸ್‌ನಲ್ಲಿ ಉಳಿದಿರುವ ಹಣ:
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) - ₹30 ಕೋಟಿ ರೂ
ಮುಂಬೈ ಇಂಡಿಯನ್ಸ್ (MI) - ₹26.10 ಕೋಟಿ ರೂ
ಪಂಜಾಬ್ ಕಿಂಗ್ಸ್ (PBK) - ₹22.50 ಕೋಟಿ ರೂ
ಗುಜರಾತ್ ಜೈಂಟ್ಸ್ (GT) - ₹17.50 ಕೋಟಿ
ರಾಜಸ್ಥಾನ್ ರಾಯಲ್ಸ್ (RR) - ₹17.35 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್ (CSK) - ₹15.60 ಕೋಟಿ
ಲಕ್ನೋ ಸೂಪರ್ ಜೈಂಟ್ಸ್ (LSG) - ₹14.85 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್ (DC) - ₹13.80 ಕೋಟಿ
ಕೋಲ್ಕತ್ತಾ ನೈಟ್‌ರೈಡರ್ಸ್ (KKR) - ₹10.05 ಕೋಟಿ
ಸನ್‌ರೈಸರ್ಸ್ ಹೈದರಾಬಾದ್ (SRH) - ₹5.15 ಕೋಟಿ
2ನೇ ದಿನ: ಇಂದು ಹರಾಜು ಪ್ರಕ್ರಿಯೆ ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಹರಾಜಾದ ಆಟಗಾರರ ಪಟ್ಟಿಯಲ್ಲಿ 27 ವಿದೇಶಿಗರಿದ್ದಾರೆ.
ಇದನ್ನೂ ಓದಿ: IPL Mega Auction: 11 ಪಂದ್ಯಗಳಲ್ಲಿ ಬರೀ 9 ವಿಕೆಟ್ ಪಡೆದ ಬೌಲರ್ಗೆ 6 ಕೋಟಿ ಕೊಟ್ಟು ಖರೀದಿಸಿದ RCB!