ನವದೆಹಲಿ: ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಇಂದು ಅತಿಶಿ ರಾಜೀನಾಮೆ ನೀಡಿದ್ದಾರೆ. ಬೆಳಗ್ಗೆ 11 ಗಂಟೆಗೆ ತಮ್ಮ ನಿವಾಸದಿಂದ ನೇರವಾಗಿ ರಾಜಭವನಕ್ಕೆ ಆಗಮಿಸಿದ ಅವರು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರು.
ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ನಿನ್ನೆ (ಶನಿವಾರ) ಪ್ರಕಟಗೊಂಡಿತು. ಒಟ್ಟು 70 ಸ್ಥಾನಗಳ ಪೈಕಿ 48 ಸ್ಥಾನಗಳೊಂದಿಗೆ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಇದರೊಂದಿಗೆ 27 ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅಷ್ಟೇ ಅಲ್ಲದೇ, ಆಮ್ ಆದ್ಮಿ ಪಾರ್ಟಿಯ ದಶಕದ ಆಡಳಿತವೂ ಕೊನೆಗೊಂಡಿದೆ. ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು, ಖಾತೆ ತೆರೆಯಲು ಮತ್ತೆ ವಿಫಲವಾಗಿದೆ.
AAP leader Atishi tenders her resignation as Delhi CM to LG VK Saxena
— ANI (@ANI) February 9, 2025
BJP emerges victorious in #DelhiAssemblyElection2025 after securing two-third majority winning 48 out of 70 seats
(Pics - Raj Niwas) pic.twitter.com/zLS1rfc1xn
ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 22 ಸ್ಥಾನಗಳನ್ನಷ್ಟೇ ಗೆದ್ದಿದ್ದು, ಪ್ರಮುಖ ನಾಯಕರಾದ ಪಕ್ಷದ ಸಂಚಾಲಕ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ಹಲವರು ಸೋಲನ್ನಪ್ಪಿದ್ದಾರೆ.
ಇದನ್ನೂ ಓದಿ: ಎದ್ದಲ್ಲೇ ಬಿದ್ದ ಆಮ್ ಆದ್ಮಿ : ದೆಹಲಿಯಲ್ಲಿ ಹುಟ್ಟಿದ ಪಕ್ಷಕ್ಕೆ ಅಲ್ಲೇ ಸೋಲು, ಪಂಜಾಬಲ್ಲಿ ಮಾತ್ರ ಅಧಿಕಾರ
ಇನ್ನೊಂದೆಡೆ, ಡೆಲ್ಲಿ ಗೆದ್ದ ಬಿಜೆಪಿ ಹೈಕಮಾಂಡ್ ಸರ್ಕಾರ ರಚನೆ, ಸಿಎಂ ಆಯ್ಕೆ ಸೇರಿದಂತೆ ನೂತನ ಸಿಎಂ ಪ್ರಮಾಣವಚನ ಕುರಿತು ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಸಿಎಂ ಹುದ್ದೆಗೆ ಬಿಜೆಪಿ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಸದ್ಯದ ಕುತೂಹಲ.
#WATCH | AAP leader Atishi leaves from Raj Niwas after submitting her resignation as Delhi CM
— ANI (@ANI) February 9, 2025
BJP emerged victorious in #DelhiAssemblyElection2025 yesterday after winning 48 out of 70 seats https://t.co/kWEioE5dXE pic.twitter.com/5If23VQMlq
ದೆಹಲಿ ಚುನಾವಣಾ ಫಲಿತಾಂಶ- 2025
- ಬಿಜೆಪಿ - 48
- ಎಎಪಿ - 22
- ಕಾಂಗ್ರೆಸ್ - 0
- ಇತರೆ - 0
ಇದನ್ನೂ ಓದಿ: ದೆಹಲಿ ಚುನಾವಣೆ ಫಲಿತಾಂಶ: 27 ವರ್ಷಗಳ ಬಳಿಕ ಬಿಜೆಪಿಗೆ ದಿಲ್ಲಿ ಗದ್ದುಗೆ, ಆಪ್ಗೆ ಹಿನ್ನಡೆ
ಇದನ್ನೂ ಓದಿ: ಆಪ್ ಕೆಡವಿ ದೆಹಲಿ ಗದ್ದುಗೆ ಏರಿದ ಬಿಜೆಪಿ : ಬಲ ಕಳೆದುಕೊಂಡ ವಿಪಕ್ಷಗಳ INDIA ಮೈತ್ರಿಕೂಟ