ETV Bharat / lifestyle

ಅಡುಗೆ ಪಾತ್ರೆಗಳಿಂದ ಬರುವ ವಾಸನೆ ಹೋಗಲಾಡಿಸೋದು ಹೇಗೆ?: ಇಲ್ಲಿದೆ ಟಿಪ್ಸ್

How to Get Rid of Smell from Utensils: ಅಡುಗೆ ಪಾತ್ರೆಗಳಿಂದ ತುಂಬಾ ಕೆಟ್ಟ ವಾಸನೆ ಬರುತ್ತಿದೆಯೇ? ಹಾಗಾದ್ರೆ, ತಜ್ಞರು ನೀಡಿರುವ ಕೆಲವು ಟಿಪ್ಸ್ ಪಾಲಿಸಿದರೆ ವಾಸನೆ ಬೇಗನೇ ಮಾಯವಾಗುತ್ತದೆ.

TIPS TO AVOID SMELL FROM UTENSILS  HOW TO GET RID OF UTENSILS SMELL  TIPS TO AVOID UTENSILS BAD SMELL  UTENSILS CLEANING TIPS IN Kannada
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : 2 hours ago

How to Get Rid of Smell from Utensils: ಅಡುಗೆ ಮಾಡಿದ ನಂತರ ಪಾತ್ರೆಗಳಿಂದ ವಾಸನೆ ಹೋಗುವುದಿಲ್ಲ. ಎಷ್ಟೇ ಪ್ರಯತ್ನಿಸಿದರೂ ಕೂಡ ವಾಸನೆ ಬರುತ್ತಲೇ ಇರುತ್ತದೆ. ನಾನ್ ವೆಜ್ ಖಾದ್ಯಗಳಾದ ಚಿಕನ್, ಮಟನ್, ಮೀನುಗಳ ವಾಸನೆಯಂತೂ ಹೇಳತೀರದು. ಇವುಗಳನ್ನು ಬೇಯಿಸಿದಾಗ ಅಡುಗೆ ಪಾತ್ರೆಗಳು ಮಾತ್ರವಲ್ಲದೆ ಅಡುಗೆ ಮನೆಯಲ್ಲೂ ದುರ್ವಾಸನೆ ಬರುತ್ತದೆ. ಕೆಲವು ರೀತಿಯ ಮಸಾಲೆಗಳನ್ನು ಬೇಯಿಸಿದಾಗಲೂ ಈ ಸಮಸ್ಯೆ ಉಂಟಾಗುತ್ತದೆ.

ಈ ಸಮಸ್ಯೆ ಅಡುಗೆಮನೆಯಲ್ಲಿ ಹತಾಶೆ ಉಂಟುಮಾಡುತ್ತದೆ. ಕೆಲವು ಜನರು ಈ ವಾಸನೆಯನ್ನು ತೊಡೆದುಹಾಕಲು ರಾಸಾಯನಿಕ ಆಧರಿತ ಕ್ಲೀನರ್​ಗಳನ್ನು ಬಳಸುತ್ತಾರೆ. ಈ ಕಾರಣದಿಂದಾಗಿ, ನಾಳಗಳ ಕ್ಷೀಣತೆ ಮತ್ತು ಆರೋಗ್ಯ ಸಮಸ್ಯೆಗಳ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಇಂತಹ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ತಜ್ಞರು ಕೆಲವು ನೈಸರ್ಗಿಕ ಸಲಹೆಗಳನ್ನು ನೀಡುತ್ತಾರೆ.

ಬಿಳಿ ವಿನೆಗರ್: ವಿನೆಗರ್ ಉತ್ತಮ ಶುಚಿಗೊಳಿಸುವ ಗುಣಗಳನ್ನು ಹೊಂದಿದೆ. ಇದು ಹಲವು ವಿಧಗಳಲ್ಲಿ ಉಪಯುಕ್ತವಾಗಿದೆ. ವಿನೆಗರ್ ಬಳಸುವುದರಿಂದ ಅಡುಗೆ ಪಾತ್ರೆಗಳ ವಾಸನೆಯನ್ನೂ ಹೋಗಲಾಡಿಸಬಹುದು ಎನ್ನುತ್ತಾರೆ ತಜ್ಞರು. ಅದಕ್ಕೂ ಮೊದಲು ಪಾತ್ರೆಯನ್ನು ಸ್ವಚ್ಛವಾಗಿ ತೊಳೆಯಿರಿ. ಆ ನಂತರ ಆ ಪಾತ್ರೆಯಲ್ಲಿ ಸ್ವಲ್ಪ ವಿನೆಗರ್ ಹಾಕಿ ಸ್ವಲ್ಪ ಸಮಯ ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿದರೆ ಪಾತ್ರೆಗಳ ವಾಸನೆ ದೂರವಾಗುತ್ತದೆ ಎಂದು ಅವರು ಹೇಳುತ್ತಾರೆ.

ನಿಂಬೆ: ನಿಂಬೆಯಲ್ಲಿ ಆ್ಯಸಿಡ್ ಅಂಶವೂ ಅಧಿಕವಾಗಿದೆ. ಹಾಗಾಗಿ ಇದು ಪಾತ್ರೆಗಳಿಂದ ಬರುವ ವಾಸನೆಯನ್ನು ಹೋಗಲಾಡಿಸುತ್ತದೆ. ಪಾತ್ರೆಯಲ್ಲಿ ನಿಂಬೆ ರಸಮಿಶ್ರಿತ ನೀರು ತುಂಬಿಸಿ ಸ್ವಲ್ಪ ಸಮಯದವರೆಗೆ ಬಿಡಿ. ಆ ನಂತರ ಪಾತ್ರೆಯನ್ನು ಡಿಶ್ ವಾಶ್ ಅಥವಾ ನಿಂಬೆಹಣ್ಣಿನಿಂದ ಉಜ್ಜಿದರೆ ವಾಸನೆ ಹೋಗುತ್ತದೆ.

ಕಾಫಿಪುಡಿ: ಪಾತ್ರೆಯ ವಾಸನೆ ಹೋಗಲಾಡಿಸಲು ಕಾಫಿಪುಡಿಯೂ ಉಪಯುಕ್ತವಾಗಿದೆ. ಇದರಲ್ಲಿರುವ ಸಾರಜನಕವು ವಾಸನೆ ಮಾಯವಾಗಿಸಲು ಕೊಡುಗೆ ನೀಡುತ್ತದೆ. ಮೊದಲು ಒಂದು ಚಮಚ ಕಾಫಿ ಪುಡಿಯನ್ನು ಪಾತ್ರೆಯಲ್ಲಿ ಹಾಕಿ. ನಂತರ ನೀರಿನಿಂದ ತುಂಬಿಸಿ. ಅದನ್ನು ಒಲೆಯ ಮೇಲೆ ಇರಿಸಿ ಮತ್ತು ಒಂದೆರಡು ನಿಮಿಷ ಕುದಿಸಿ. ಅದರ ನಂತರ ಸ್ಟೌ ಆಫ್ ಮಾಡಿ ಮತ್ತು ಒಂದು ಕಾಲು ಗಂಟೆ ಅದನ್ನು ಪಕ್ಕಕ್ಕೆ ಇರಿಸಿ. ನಂತರ ಡಿಶ್​ವಾಶ್​ನೊಂದಿಗೆ ಪಾತ್ರೆಯನ್ನು ಸ್ವಚ್ಛಗೊಳಿಸಿ.

ಅಡಿಗೆ ಸೋಡಾ: ಪಾತ್ರೆಯಿಂದ ತುಂಬಾ ವಾಸನೆ ಬರುತ್ತಿದ್ದರೆ, ಅಡಿಗೆ ಸೋಡಾವನ್ನು ಬಳಸಬಹುದು. ದೊಡ್ಡ ಬಟ್ಟಲಿನಲ್ಲಿ ನೀರನ್ನು ಸುರಿಯಿರಿ. ವಾಸನೆಯ ಪಾತ್ರೆಯನ್ನು ಅದರಲ್ಲಿ ಮುಳುಗಿಸಿ. ನೀರಿಗೆ ಎರಡು ಚಿಟಿಕೆ ಅಡಿಗೆ ಸೋಡಾ ಸೇರಿಸಿ ಹಾಗೂ ಸ್ವಲ್ಪ ಸಮಯದವರೆಗೆ ನೀರನ್ನು ಕುದಿಸಿ. ಅದರ ಬಳಿಕ ನೀರಿನಿಂದ ಪಾತ್ರೆಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ.

ಕಡಲೆ ಹಿಟ್ಟು: ಕಡಲೆ ಹಿಟ್ಟು ಅಡುಗೆಗೆ ಮಾತ್ರವಲ್ಲದೆ ಭಕ್ಷ್ಯಗಳ ವಾಸನೆಯನ್ನು ಹೋಗಲಾಡಿಸಲು ಸಹ ಬಳಸಬಹುದು. ಇದು ವಾಸನೆಯನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿದೆ. ಪಾತ್ರೆಯಲ್ಲಿ ಸ್ವಲ್ಪ ಕಡಲೆ ಹಿಟ್ಟು ಉದುರಿಸಿ. ಅದರ ನಂತರ, ಪಾತ್ರೆಯನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಪಾತ್ರೆಯ ವಾಸನೆಯನ್ನು ತೆಗೆದುಹಾಕುತ್ತದೆ.

ದಾಲ್ಚಿನ್ನಿ: ಅಡುಗೆ ಪಾತ್ರೆಗಳಿಂದ ವಾಸನೆ ಬಂದರೆ ದಾಲ್ಚಿನ್ನಿ ಬಳಸಬಹುದು. ವಾಸನೆ ಬರುವ ಪಾತ್ರೆಯಲ್ಲಿ ದಾಲ್ಚಿನ್ನಿ ಅಥವಾ ದಾಲ್ಚಿನ್ನಿ ಪುಡಿಯನ್ನು ಹಾಕಿ ಪೂರ್ಣ ನೀರನ್ನು ಸುರಿಯಿರಿ ಹಾಗೂ 5 ನಿಮಿಷಗಳ ಕಾಲ ಒಲೆಯ ಮೇಲೆ ಕುದಿಸಿ. ತಣ್ಣಗಾದ ನಂತರ ನೀರನ್ನು ತೆಗೆದು ಸ್ವಚ್ಛಗೊಳಿಸಿದರೆ ವಾಸನೆ ಮಾಯವಾಗುತ್ತದೆ ಎನ್ನುತ್ತಾರೆ ತಜ್ಞರು.

ಬೆಣ್ಣೆ: ಬೆಣ್ಣೆಯು ಪಾತ್ರೆಗಳ ದುರ್ವಾಸನೆ ಹೋಗಲಾಡಿಸುತ್ತದೆ. ಸ್ವಲ್ಪವೇ ಬೆಣ್ಣೆಯನ್ನು ವಾಸನೆ ಇರುವ ಪಾತ್ರೆಗಳಿಗೆ ಉಜ್ಜಿಕೊಳ್ಳಿ. ಅದರ ನಂತರ ಸೋಪ್ ಬಳಸಿ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ಪಾತ್ರೆಗಳಿಂದ ದುರ್ವಾಸನೆ ಬರುವುದಿಲ್ಲ. ಮತ್ತು ಹೊಸದರಂತೆ ಹೊಳೆಯುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಹೀಗೆ ಸ್ವಚ್ಛಗೊಳಿಸಿದರೆ ಸ್ಟೀಲ್ ಸಿಂಕ್​ನ ಜಿಡ್ಡು, ವಾಸನೆ ಮಾಯವಾಗಿ ಫಳಫಳ ಹೊಳೆಯುತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.