ಮುಗಳಖೋಡ ಜಾತ್ರೆ ವೇಳೆ ಬಿದ್ದಿದ್ದ ಕಸ ಸ್ವಚ್ಛಗೊಳಿಸಲು ಕೈ ಜೋಡಿಸಿದ ಮುರುಘರಾಜೇಂದ್ರ ಸ್ವಾಮೀಜಿ - Murugarajendra Swamiji
🎬 Watch Now: Feature Video
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ ಯಲ್ಲಾಲಿಂಗ ಮಹಾರಾಜರ 34ನೇ ಪುಣ್ಯಸ್ಮರಣೆ ಹಿನ್ನೆಲೆ 14 ದಿನಗಳ ಕಾಲ ನಡೆದ ಮುಗಳಖೋಡ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಇಂದು ಬೆಳಗ್ಗೆ ಮುಗಳಖೋಡದ ಪೀಠಾಧ್ಯಕ್ಷ ಮುರುಘರಾಜೇಂದ್ರ ಸ್ವಾಮೀಜಿ, ಕುಡಚಿ ಶಾಸಕ ಪಿ.ರಾಜೀವ್ ಹಾಗೂ ಮಠದ ನೂರಾರು ಭಕ್ತರು ಸೇರಿ ಜಾತ್ರೆ ವೇಳೆ ಆಗಿದ್ದ ಕಸವನ್ನು ಸ್ವಚ್ಛ ಮಾಡುವುದರ ಮೂಲಕ ಸ್ವಚ್ಛ ಭಾರತ ಅಭಿಯಾನ ಎಲ್ಲಾ ಭಕ್ತರಿಗೆ ಪ್ರೇರಪಣೆಯಾಗುವಂತೆ ಮಾಡಿದ್ದಾರೆ.